ಹೊಸದಿಗಂತ ವರದಿ ಪುತ್ತೂರು:
ಮಿತ್ತೂರು ಕುಕ್ಕರೆಬೆಟ್ಟು ಬಳಿ ಸೋಮವಾರ ಮಧ್ಯಾಹ್ನ ಭಾರೀ ಮಳೆಗೆ ಮರ ರಸ್ತೆಗೆ ಉರುಳಿ ಬಿದ್ದು ಪುತ್ತೂರು ಮಾಣಿ ನಡುವಣ ವಾಹನ ಸಂಚಾರ ಸ್ಥಗಿತಗೊಂಡಿತು.
ಬಳಿಕ ಸ್ಥಳೀಯರ ಸಹಕಾರದಿಂದ ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಲಾಯಿತು. ಇದರಿಂದ ಪುತ್ತೂರು ಮಾಣಿ ನಡುವಣ ಓಡಾಟ ನಡೆಸುವವರಿಗೆ ತೊಂದರೆ ಉಂಟಾಯಿತು. ವಾಹನಗಳು ಮುರ ಮತ್ತು ಇತರೆ ಮಾರ್ಗಗಳ ಮೂಲಕ ಸಂಚರಿಸಿತು.