ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೈಂದೂರಿನ ಬಿಜೆಪಿ ಶಾಸಕ ಗುರುರಾಜ ಗಂಟಿಹೊಳೆ ಅವರು ಅಪಾಯವೊಂದರಿಂದ ಬಚಾವ್ ಆಗಿದ್ದಾರೆ. ಅವರು ಪ್ರಯಾಣದ ವೇಳೆ ರಸ್ತೆಯಲ್ಲಿ ಮರ ಉರುಳಿಬಿದ್ದಿದ್ದು, ಉರುಳುವ ಸದ್ದು ಕೇಳುತ್ತಲೇ ಸಮಯ ಪ್ರಜ್ಞೆಯಿಂದ ಕಾರ್ ಚಾಲಕರಾಗಿರುವ ಚಂದ್ರಶೇಖರ್ ಅವರು ಕಾರ್ ನಿಲ್ಲಿಸಿದ್ದಾನೆ. ಈ ಮೂಲಕ ದೊಡ್ಡ ಅನಾಹುತದಿಂದ ಶಾಸಕರು ಪಾರಾಗಿದ್ದಾರೆ.
ಕುಂದಾಪುರದ ಹಾಲಾಡಿ ರಸ್ತೆಯಲ್ಲಿ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಅಲ್ಲಲ್ಲಿ ಗುಡ್ಡ ಜರಿಯುವುದು, ಮರ ಉರುಳುವ ಘಟನೆಗಳು ನಡೆಯುತ್ತಿವೆ. ಹಾಲಾಡಿ ರಸ್ತೆಯಲ್ಲಿ ಮಾರ್ಗದ ಬದಿಯ ಒಂದು ಮರ ಉರುಳಿ ಬಿದ್ದು ಸಂಚಾರಕ್ಕೆ ತೊಡಕು ಉಂಟಾಗಿತ್ತು. ಅದನ್ನು ತೆರವು ಮಾಡುವ ಕೆಲಸವನ್ನು ಸ್ಥಳೀಯರು ಮತ್ತು ಒಮ್ಮೆ ಸಾಮಾನ್ಯ ವ್ಯಕ್ತಿಯಂತೆ ಎಲ್ಲರೊಂದಿಗೆ ಸೇರಿ ಬಿದ್ದ ಮರವನ್ನು ತೆರವು ಮಾಡುವ ಕೆಲಸಕ್ಕೆ ಕೈಜೋಡಿಸಿದರು.