CYBER SCAM | ಮಗಳ ಬಗೆಗಿನ ಸುಳ್ಳು ಕರೆ: ಹೃದಯಾಘಾತದಿಂದ ತಾಯಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮಗಳು ಲೈಂಗಿಕ ಹಗರಣದಲ್ಲಿ ಸಿಕ್ಕಿಬಿದ್ದಿದ್ದಾಳೆಂದು ಬಂದ ಸೈಬರ್​ ವಂಚಕರ ಕರೆಗೆ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ಹೃದಯಾಘಾತಕ್ಕೆ ಬಲಿಯಾದ ಘಟನೆ ಆಗ್ರಾದಲ್ಲಿ ಬೆಳಕಿಗೆ ಬಂದಿದೆ. ಸೆಪ್ಟೆಂಬರ್​ 30ರಂದು ಈ ಘಟನೆ ನಡೆದಿದ್ದು, ವಂಚನೆಯ ಕರೆಗೆ ಶಿಕ್ಷಕಿ ಅನ್ಯಾಯವಾಗಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಮಾಲ್ತಿ ವರ್ವಾ (58) ಸಾವನ್ನಪ್ಪಿರುವ ಶಿಕ್ಷಕಿ. ಆಗ್ರಾದ ಅಚ್ನೇರಾದ ಜೂನಿಯರ್​​ ಹೈಸ್ಕೂಲ್​​​​ನಲ್ಲಿ ಶಿಕ್ಷಕಿಯಾಗಿದ್ದರು. ಸೆಪ್ಟೆಂಬರ್​​ 30ರಂದು ಮಧ್ಯಾಹ್ನ 12 ಗಂಟೆಗೆ ವಾಟ್ಸ್​ಆ್ಯಪ್​ನಲ್ಲಿ ಕರೆ ಬಂದಿದೆ. ಕರೆ ಸ್ವೀಕರಿಸಿದ ಶಿಕ್ಷಕಿಗೆ ಮಗಳು ಲೈಂಗಿಕ ಹಗರಣದಲ್ಲಿ ಸಿಕ್ಕಿಬಿದ್ದಿದ್ದಾಳೆ. ಆಕೆಯ ಗುರುತನ್ನು ಬಹಿರಂಗ ಪಡಿಸುತ್ತೇವೆ ಎಂದು ಸೈಬರ್​ ವಂಚಕರು ಕರೆಯಲ್ಲಿ ಬೆದರಿಸಿದ್ದಾರೆ ಎಂದು ಮಗ ದೀಪಾಂಶು ರಜಪೂತ್​​ ತಿಳಿಸಿದ್ದಾರೆ.

ಬಳಿಕ, ತಾಯಿ ನನ್ನ ಬಳಿ ಸಹೋದರಿಯ ವಿಚಾರ ಹೇಳಿದರು. ಫೋನ್​ ನಂಬರ್ ಪರಿಶೀಲಿಸಿದಾಗ ಅದು ಸೈಬರ್​​ ವಂಚನೆಯ ಕರೆ ಎಂದು ನಾನು ತಾಯಿಗೆ ಹೇಳಿದೆ. ಆದರೆ ತಾಯಿ ಚಿಂತೆಗೆ ಒಳಗಾಗಿದ್ದರು. ನಂತರ ನಾನು ಸಹೋದರಿಯೊಂದಿಗೆ ಮಾತನಾಡಿದೆ. ಎಲ್ಲವನ್ನು ಸಹಜ ಸ್ಥಿತಿಗೆ ತಂದಿದ್ದೇನೆ. ಚಿಂತಿಸಬೇಡಿ ಎಂದು ತಾಯಿ ಬಳಿ ಹೇಳಿದರೂ ಅವರಿಗಾದ ಶಾಕ್​​ನಿಂದಾಗಿ ಆರೋಗ್ಯ ಹದಗೆಟ್ಟಿತು. ತಾಯಿ ಶಾಲೆ ಮುಗಿಸಿ ಮನೆಗೆ ಬರುವಾಗ ಎದೆನೋವು ಎಂದು ಹೇಳಿದರು. ಮನೆಗೆ ಬಂದಂತೆ ಅವರ ಆರೋಗ್ಯ ತುಂಬಾ ಹದಗೆಟ್ಟಿತು. ಕೂಡಲೇ ಆಸ್ಪತ್ರೆಗೆ ಕರೆದೊಯ್ದೆವು. ಆದರೆ ಈ ವೇಳೆ ವೈದರು ಸಾವನ್ನಪ್ಪಿರುವುದಾಗಿ ದೃಢಪಡಿಸಿದರು ಎಂದು ಮಾಲ್ತಿ ವರ್ವಾ ಮಗ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!