ಹೊಸ ದಿಗಂತ ವರದಿ,ಮಳವಳ್ಳಿ:
ತಾಲೂಕಿನ ಕಿರುಗಾವಲು ಸಮೀಪ ದೇಶವಳ್ಳಿ ಗ್ರಾಮದದಲ್ಲಿ ಕೌಟುಂಬಿಕ ಕಲಹದಿಂದಾಗಿ ಪತಿಯೇ ಪತ್ನಿಯನ್ನು ಹತ್ಯೆ ಮಾಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ದೇಶುವಳ್ಳಿ ಗ್ರಾಮದ ಮಧುಶ್ರೀ (32) ಎಂಬುವರನ್ನು ಆಕೆಯನ್ನು ಪತಿ ಮಹದೇವ ಕಬ್ಬಿಣದ ರಾಡಿನಿಂದ ಹೊಡೆದು ಹತ್ಯೆ ಮಾಡಿದ್ದಾನೆ,ಮದುವೆಯಾಗಿ 10 ವರ್ಷ ಜೀವನ ನಡೆಸಿದ ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು,ಮಂಗಳವಾರ ರಾತ್ರಿ ಗಂಡ ಹೆಂಡಿರ ನಡುವಿನ ಕಲಹ,ಗಲಾಟೆ ಈ ಘಟನೆಗೆ ಕಾರಣವೆನ್ನಲಾಗಿದೆ.
ಪತ್ನಿಯನ್ನು ಹತ್ಯೆ ಮಾಡಿದ ನಂತರ ಖುದ್ದು ಮಹದೇವ ಕಿರುಗಾವಲು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಈ ಸಂಭಂದ ಸಬ್ ಇನ್ಸೆಪೆಕ್ಟರ್ ಸತೀಶ ಮುಂದಿನ ಕ್ರಮ ಕ್ರಮವಹಿಸಿದ್ದಾರೆ.