ಹೊಸದಿಗಂತ ವರದಿ, ಕಲಬುರಗಿ:
ಪ್ರೀತಿಯಿಂದ ಸಾಕಿದ ಶ್ವಾನವೊಂದು ಹೃದಯಾಘಾತದಿಂದ ಸಾವನ್ನಪಿರುವುದಕ್ಕೆ ಇಡಿ ಕುಟುಂಬವೇ ಕಣ್ಣೀರಿಟ್ಟಿದೆ.
ಕಲಬುರಗಿ ನಗರದ ನ್ಯೂ ರಾಘವೇಂದ್ರ ಕಾಲೋನಿ ನಿವಾಸಿ ಮೋಹನ ಕುಲಕರ್ಣಿ ಎಂಬುವರಿಗೆ ಸೇರಿದ ನಾಯಿ ಕ್ಯಾಂಡಿ (ಶ್ವಾನದ ಹೆಸರು), ಶುಕ್ರವಾರ ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದೆ.
ಸುಮಾರು 6 ವರ್ಷಗಳಿಂದ ಮನೆಯಲ್ಲಿ ಪ್ರೀತಿಯಿಂದ, ಮನೆ ಮಕ್ಕಳಂತೆ ಸಾಕಿದ್ದ ಕ್ಯಾಂಡಿ ಸಾವನ್ನಪಿರುವುದರಿಂದ ಮನೆ ಮಂದಿ ಎಲ್ಲರೂ ಕಣ್ಣೀರು ಹಾಕಿದ್ದಾರೆ. ಅದರಲ್ಲೂ ಮಕ್ಕಳು ಕ್ಯಾಂಡಿಯನ್ನು ಹೆಚ್ಚಾಗಿ ಪ್ರೀತಿ ಮಾಡುತ್ತಿದ್ದರಿಂದ ಮಕ್ಕಳು ಸಹ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ವಿಧಿವಿಧಾನದೊಂದಿಗೆ ಕುಟುಂಬದ ಸದಸ್ಯರು ಕ್ಯಾಂಡಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.