March 26, 2026
Thursday, March 26, 2026
spot_img

ಸಾಲಿಗ್ರಾಮ ದೇಗುಲಕ್ಕೆ ಖ್ಯಾತ ಚಲನಚಿತ್ರ ನಟ ಉಪೇಂದ್ರ ದಂಪತಿ ಭೇಟಿ

ಹೊಸದಿಗಂತ ವರದಿ ಕೋಟ:

ವಿಷ್ಣುವಿನ ಸಿಂಹದ ತಲೆಯ ರೂಪವಾದ ನರಸಿಂಹ ದೇವರ ದರುಶನಕ್ಕಾಗಿ ನಟ ಉಪೇಂದ್ರ ಕುಟುಂಬ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಳಕ್ಕೆ ಭೇಟಿ ನೀಡಿದೆ.

ಕನ್ನಡ ಚಿತ್ರರಂಗದ ರಿಯಲ್‌ ಸ್ಟಾರ್‌ ಉಪೇಂದ್ರ ಹಾಗೂ ನಟಿ ಪ್ರಿಯಾಂಕಾ ಅವರ ಕುಲದೇವರಾಗಿರುವ ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಳಕ್ಕೆ ಮಂಗಳವಾರ ಭೇಟಿ ನೀಡಿ ಸೇವೆ ಸಲ್ಲಿಸಿದರು.

ದೇಗುಲದ ವತಿಯಿಂದ ಪ್ರಸಾದ ವಿತರಿಸಿ ಶಾಲು ಹೋದಿಸಿ ಗೌರವಿಸಲಾಯಿತು. ಆಡಳಿತ ಮಂಡಳಿಯ ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ,ಸದಸ್ಯರಾದ ಶ್ರೀ ಶ್ರೀಧರ ರಾವ್ ಕೇರಳ,ಹಾಗೂ ದೇಗುಲದ ಮ್ಯಾನೇಜರ್ ಗಣೇಶ್ ಭಟ್ಟ ಮತ್ತಿತರರು ಇದ್ದರು.

ಉಡುಪಿ ನಗರದಿಂದ 23 ಕಿಲೋ ಮೀಟರ್ ದೂರದಲ್ಲಿ ಸಾಲಿಗ್ರಾಮ ಸಿಗುತ್ತದೆ. ಈ ಊರು ಹಾಗೂ ಸುತ್ತಲಿನ 14 ಗ್ರಾಮಗಳನ್ನು ಗುರುನರಸಿಂಹ ದೇವರು ಕಾಯುತ್ತಿದ್ದಾರೆ ಎನ್ನುವ ನಂಬಿಕೆಯಿದೆ. ಸ್ವತಃ ನಾರದ ಮುನಿಗಳೇ ಈ ದೇವಾಲಯದ ಸ್ಥಾಪನೆಗೆ ಕಾರಣರಾಗಿದ್ದಾರೆ ಎಂದು ಹೇಳಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !