ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಖ್ಯಾತ ಗಾಯಕಿ ಹನಿಯಾ ಅಸ್ಲಾಂ 39ನೇ ವಯಸ್ಸಿಗೆ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ.
ಗಾಯಕಿಯ ನಿಧನ ಬಗ್ಗೆ ಇದೀಗ ಸಹೋದರಿ ಜೆಬ್ ಬಂಗಾಶ್ ಅವರು ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ತಿಳಿಸಿದ್ದಾರೆ.ಗಾಯಕಿ ಹನಿಯಾ ನಿಧನದ ಸುದ್ದಿ ಕೇಳಿ ಆಪ್ತರು, ಸಿನಿಮಾರಂಗದ ಕಲಾವಿದರು, ಸಂಗೀತ ಕಲಾವಿದರು ಸಂತಾಪ ಸೂಚಿಸಿದ್ದಾರೆ.
ಇನ್ನೂ ಕೋಕ್ ಸ್ಟುಡಿಯೋದಲ್ಲಿ ಲೈಲಿಜಾನ್, ಬಿಬಿ ಸನಮ್, ಚಹುಪ್, ಸೇರಿದಂತೆ ಹಲವು ಹಿಟ್ ಹಾಡುಗಳನ್ನು ಹಾಡಿದ್ದರು. ಅದಷ್ಟೇ ಅಲ್ಲ, ಬಾಲಿವುಡ್ ಬೆಡಗಿ ಆಲಿಯಾ ಭಟ್ ನಟನೆಯ ‘ಹೈವೇ’ ಚಿತ್ರ, ಮತ್ತು `ಮದ್ರಾಸ್ ಕೆಫೆ’ ಚಿತ್ರಗಳಲ್ಲಿ ಹಾಡಿದರು.