ವಿಶ್ವವಿಖ್ಯಾತ ನೇತ್ರ ತಜ್ಞ ಡಾ.ಚಂದ್ರಪ್ಪ ರೇಷ್ಮಿ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ವಿಶ್ವವಿಖ್ಯಾತ ನೇತ್ರ ತಜ್ಞ ಡಾ.ಚಂದ್ರಪ್ಪ ರೇಷ್ಮಿ (90) ನಿಧನರಾಗಿದ್ದಾರೆ.
ರೇಷ್ಮಿ ಅವರು ವಿಶ್ವ ಪ್ರಸಿದ್ಧ ನೇತ್ರತಜ್ಞರಾಗಿ ಹೆಸರಾಗಿದ್ದರು.

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಅವರ ಸ್ವಗೃಹದಲ್ಲಿಇಂದು ಮಧ್ಯಾಹ್ನ 2 ಗಂಟೆಯ ವರೆಗೆ ಸಾರ್ವಜನಿಕ ದರುಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ತದನಂತರ ಮಧ್ಯಾಹ್ನ 3 ಗಂಟೆಗೆ ಚಿತ್ತಾಪುರ ಪಟ್ಟಣದಲ್ಲಿ ಡಾ.ಚಂದ್ರಪ್ಪ ರೇಷ್ಮಿ ಅವರ ಅಂತ್ಯಸಂಸ್ಕಾರ ನೆರವೇರಲಿದೆ.

ಡಾ.ಚಂದ್ರಪ್ಪ ರೇಷ್ಮಿ ಅವರು ಚಿತ್ತಾಪುರ ಪಟ್ಟಣದಲ್ಲಿ ಜನಿಸಿದ್ದರು. ಬಳಿಕ ಅಮೆರಿಕದಲ್ಲಿ ಹಲವು ವರ್ಷಗಳ ಕಾಲ ನೆಲೆಸಿದ್ದರು. ಆದರೆ ತಮ್ಮ ಕೊನೆದಿನಗಳನ್ನು ಚಿತ್ತಾಪುರದಲ್ಲಿ ಕಳೆಯಲು ಕೆಲ ವರ್ಷಗಳಿಂದ ಕಲಬುರಗಿ ನಗರದಲ್ಲಿ ವಾಸವಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!