ಆರ್‌ಸಿಬಿ ವಿಜಯೋತ್ಸವ ಸಂಭ್ರಮದ ಬೈಕ್‌ Rally ವೇಳೆ ಅಭಿಮಾನಿ ಸಾವು

ಹೊಸದಿಗಂತ ವರದಿ ಶಿವಮೊಗ್ಗ:

ಆರ್‌ಸಿಬಿ ವಿಜಯೋತ್ಸವದಲ್ಲಿ ಓರ್ವ ಮೃತಪಟ್ಟಿರುವ ಘಟನೆ ನಡೆದಿದೆ.

ವೆಂಕಟೇಶ ನಗರದ ಅಭಿಷೇಕ್ (21) ಮೃತಪಟ್ಟಿದ್ದಾರೆ. ಬೈಕ್ rally ಮೂಲಕ ತೆರಳುತ್ತಿದ್ದ ಸಂದರ್ಭದಲ್ಲಿ ಉಷಾ ನರ್ಸಿಂಗ್ ಹೋಂ ಬಳಿ ಬಿದ್ದು ಮೃತಪಟ್ಟಿದ್ದಾನೆ.

ಬೆಳಗಿನಜಾವ 5 ಗಂಟೆಯವರೆಗೂ ನಗರದ ಹಲವು ವೃತ್ತ, ಕ್ಲಬ್, ಬಾಡಾವಣೆಗಳಲ್ಲಿ ವಿಜಯೋತ್ಸವ ನಡೆಸಿದ್ದಾರೆ.ಗೋಪಿ ವೃತ್ತದಲ್ಲಿ ಅಭಿಮಾನಿಗಳ‌ ವರ್ತನೆ ಮಿತಿ ಮೀರಿದ್ದರಿಂದಾಗಿ ಪೊಲೀಸರು‌ ಲಘುಲಾಠಿ ಚಾರ್ಜ್ ಮಾಡಿ ‌ಜನರನ್ನು ಚದುರಿಸಲಾಯಿತು.

ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತಾದರೂ ಈ ಪ್ರಮಾಣದಲ್ಲಿ ವಿಜಯೋತ್ಸವ ನಡೆಯುತ್ತದೆ ಎಂದು ಪೊಲೀಸರಿಗೂ ಮಾಹಿತಿ ಇರಲಿಲ್ಲ. ಕ್ಲಬ್ ಗಳಲ್ಲಿ, ಪ್ರಮುಖ ಹೋಟೆಲ್ ಗಳಲ್ಲಿ ಬೃಹತ್ ಪರದೆಗಳನ್ನು ಅಳವಡಿಸಿ ಮ್ಯಾಚ್ ವೀಕ್ಷಣೆಗೆ ಅವಕಾಶ ಮಾಡಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!