ಹೊಸದಿಗಂತ ಡಿಜಿಟಲ್ ಡೆಸ್ಕ್:
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಕನಸಿನ ಕೂಸು ಗಂಧದ ಗುಡಿ ಇಂದು ತೆರೆಕಂಡಿದ್ದು, ಅಪ್ಪು ನೋಡಿ ಅಭಿಮಾನಿಗಳು ಖುಷಿಯಲ್ಲಿ ಕಣ್ಣೀರಿಟ್ಟಿದ್ದಾರೆ.
ವಿಶ್ವದಾದ್ಯಂತ ಗಂಧದ ಗುಡಿ ರಿಲೀಸ್ ಆಗಿದ್ದು, ರಾಜ್ಯದಲ್ಲಿ 223 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಗ್ರ್ಯಾಂಡ್ ರಿಲೀಸ್ ಆಗಿದೆ. ಬೆಳಗ್ಗೆಯಿಂದಲೇ ಗಂಧದ ಗುಡಿ ಹೌಸ್‌ಫುಲ್ ಶೋ ಆಗಿದೆ. ಮಾರ್ನಿಂಗ್ ಶೋಗಳು ಭರ್ತಿಯಾಗಿದ್ದು, ಪ್ರೀಮಿಯರ್ ಶೋ ಸೀಟುಗಳು ತುಂಬುತ್ತಿವೆ.
ಬೆಂಗಳೂರಿನ ನರ್ತಕಿ ಥಿಯೇಟರ್ ಹೌಸ್‌ಫುಲ್ ಆಗಿದ್ದು, ಜನ ಥಿಯೇಟರ್ ಮುಂದೆ ಕುಣಿದು ಖುಷಿಪಟ್ಟಿದ್ದಾರೆ. ಅಪ್ಪು ನೋಡಿದ ಖುಷಿ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ದನಿ, ಪುನೀತ್ ಅವರ ಪರಿಸರ ಕಾಳಜಿ ಸಂದೇಶ ಮನಮುಟ್ಟುವಂತಿದೆ. ಕೊನೆಯ ಬಾರಿ ಪುನೀತ್ ಅವರನ್ನು ಕಣ್ತುಂಬಿಕೊಂಡ ಫ್ಯಾನ್ಸ್ ಭಾವುಕರಾಗಿದ್ದಾರೆ.