Thursday, December 25, 2025

ಸುದೀಪ್‌ ಕಟೌಟ್‌ಗೆ ಮದ್ಯ ಸುರಿದು ಸೆಲಬ್ರೇಟ್‌ ಮಾಡಿದ ಅಭಿಮಾನಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕನ್ನಡ ಚಿತ್ರರಂಗದ ಖ್ಯಾತ ನಟ ಕಿಚ್ಚ ಸುದೀಪ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ ‘ಮಾರ್ಕ್’ ಇಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಎಲ್ಲೆಡೆ ಸಂಭ್ರಮಾಚರಣೆ ಜೋರಾಗಿದೆ.

ಶಿವಮೊಗ್ಗ ನಗರದಲ್ಲಿ ಮಾಲ್‌ ಸಹಿತ 4 ಚಿತ್ರಮಂದಿರಗಳಲ್ಲಿ ಸುದೀಪ್​ ಪೊಲೀಸ್​ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಿನಿಮಾ ಬಿಡುಗಡೆ ಆಗಿದೆ. ಬೆಳಗ್ಗೆ 6 ಗಂಟೆಗೆ ಫ್ಯಾನ್ಸ್ ಶೋ ನಡೆಯಿತು. ಈ ಶೋನಲ್ಲಿ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಮೆಚ್ಚಿನ ನಟನನ್ನು ಬಿಗ್​ ಸ್ಕ್ರೀನ್​​​​ನಲ್ಲಿ ಕಣ್ತುಂಬಿಕೊಂಡರು. ಒಂದು ವರ್ಷದ ಬಳಿಕ ಖ್ಯಾತ ನಟನನ್ನು ದೊಡ್ಡ ಪರದೆ ಮೇಲೆ ನೋಡಿದ ಅಭಿಮಾನಿಗಳು ಹುಚ್ಚೆದ್ದು ಕುಣಿದು ಕುಪ್ಪಳಿಸಿದರು.

ಸಹಜವಾಗಿ ಚಿತ್ರಮಂದಿರದ ಹೊರಗೆ ಅಭಿಮಾನಿಗಳು ನಾಯಕ ನಟನ ಕಟೌಟ್, ಪೋಸ್ಟರ್​ಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸುತ್ತಾರೆ. ಆದ್ರೆ, ಸುದೀಪ್ ಅವರ ಕಟೌಟ್​ಗೆ ಹಾಲಿನ ಅಭಿಷೇಕ ಮಾಡುವುದರ ಬದಲು ಅಭಿಮಾನಿಗಳು ಮದ್ಯ ಸುರಿದರು.

ಚಿತ್ರಮಂದಿರದ ಒಳಗೂ ಹೊರಗೂ ಅಭಿಮಾನಿಗಳು ಕಿಚ್ಚ ಸುದೀಪ್​ ಭಾವಚಿತ್ರದ ಬಾವುಟ ಹಿಡಿದು ಭರ್ಜರಿ ಡ್ಯಾನ್ಸ್ ಮಾಡಿದರು. ಚಿತ್ರಮಂದಿರದ ತುಂಬೆಲ್ಲಾ ನಟನ ಬ್ಯಾನರ್, ಬಂಟಿಂಗ್ಸ್ ಹಾಕಿ ಖುಷಿಪಟ್ಟರು. ಚಿತ್ರ ನೋಡಿ ಉತ್ತಮ ಪ್ರತಿಕ್ರಿಯೆ ನೀಡಿದರು.

error: Content is protected !!