ಹೊಸದಿಗಂತ ಡಿಜಿಟಲ್ ಡೆಸ್ಕ್:
ಇದೇ ಜನವರಿ ಎಂಟರಂದು ನಟ ಯಶ್ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದು, ಈಗಾಗಲೇ ಫ್ಯಾನ್ಸ್ ಭರ್ಜರಿ ತಯಾರಿ ನಡೆಸಿದ್ದಾರೆ.
ಯಶ್ ಅವರ ಸ್ನೇಹಿತರು, ಫ್ಯಾನ್ಸ್ ರಾಜ್ಯದ ಹಲವು ಕಡೆಗಳಲ್ಲಿ ಬಿಲ್ಬೋರ್ಡ್ ಮೂಲಕ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಬೆಂಗಳೂರಿನಲ್ಲೇ ನೂರಾರು ದೊಡ್ಡ ದೊಡ್ಡ ಬಿಲ್ಬೋರ್ಡ್ ರಾರಾಜಿಸುತ್ತಿವೆ.
‘ಟಾಕ್ಸಿಕ್’ ಸಿನಿಮಾದ ಕೆಲಸಗಳಲ್ಲಿ ಯಶ್ ಅವರು ಬ್ಯುಸಿ ಆಗಿದ್ದಾರೆ. ಈ ಸಿನಿಮಾದ ಮೇಲೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ. ಮಾರ್ಚ್ 19ರಂದು ‘ಟಾಕ್ಸಿಕ್’ ಚಿತ್ರ ರಿಲೀಸ್ ಆಗಲಿದೆ.
CINE | ರಾಕಿಂಗ್ ಸ್ಟಾರ್ ಬರ್ಥ್‌ಡೇಗೆ ಫ್ಯಾನ್ಸ್ ಸಜ್ಜು, ಎಲ್ಲೆಡೆ ಪೋಸ್ಟರ್ಸ್, ಬ್ಯಾನರ್ಸ್!

