ಹೊಸದಿಗಂತ ವರದಿ ವಿಜಯಪುರ:
ಸಾಲಬಾಧೆ ತಾಳದೆ ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಹಲಸಂಗಿ ಗ್ರಾಮದಲ್ಲಿ ನಡೆದಿದೆ
ಇಲ್ಲಿನ ಚಂದ್ರಕಾಂತ ಅರ್ಜುನ ಗುಡುಗುಂಟಿ (40) ಮೃತ ದುರ್ದೈವಿಯಾಗಿದ್ದು, ಈತ ಬ್ಯಾಂಕ್, ಸೂಸೈಟಿ, ಕೈಸಾಲ ಸೇರಿದಂತೆ 10 ಲಕ್ಷ ರೂಪಾಯಿ ಸಾಲ ಮಾಡಿದ್ದು. ಸಾಲ ತೀರಿಸಲಾಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.