ಹೊಸದಿಗಂತ ಡಿಜಿಟಲ್ ಡೆಸ್ಕ್:
ರೈತರೊಬ್ಬರು ಪ್ರಧಾನಿ ಮೋದಿಯವರ ಮೇಲೆ ಅಪಾರ ಅಭಿಮಾನ ತೋರಿದ್ದಾರೆ. ನಿಂತಿದ್ದ ಬಸ್ಸಿನಲ್ಲಿ ಮೋದಿಯವರ ಫೋಟೋ ನೋಡಿ ಹತ್ತಿರ ಹೋಗಿ ಪ್ರೀತಿ, ಅಭಿಮಾನದಿಂದ ಮಾತನಾಡಿದ್ದಾರೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಕರ್ನಾಟಕದಲ್ಲಿ ನಡೆದ ಈ ದೃಶ್ಯವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಒಬ್ಬ ರೈತ ನೋಡಲು ತುಂಬಾ ಭಾವುಕನಾಗಿ ಬಸ್ ಮೇಲೆ ಪ್ರಧಾನಿ ಮೋದಿಯವರ ಫೋಟೋ ಮುಂದೆ ನಿಂತು ಪ್ರೀತಿಯಿಂದ ಮಾತನಾಡಿದ್ದಾರೆ. ಮೋದಿ ಫೋಟೋಗೆ ತನ್ನ ಮನದಾಳದ ಮಾತು ಹೇಳಿದರು. ಮೊದಲು 1000 ರೂಪಾಯಿ ಪಿಂಚಣಿ ಬರುತ್ತಿತ್ತು, ಈಗ 500 ರೂಪಾಯಿ ಹೆಚ್ಚಿಸಿದ್ದೀರಿ, ನಿಮ್ಮ ಸರ್ಕಾರ 5 ಲಕ್ಷ ರೂಪಾಯಿ ಆರೋಗ್ಯ ವಿಮೆ ನೀಡುತ್ತಿದೆ. ಬಡವರ ಮನೆಗಳು ಸದಾ ಹಸಿರಿನಿಂದ ಕೂಡಿರಬೇಕು ಎಂಬ ಸದಾಶಯ ನಿನ್ನದು. ನಿಮ್ಮ ಪಾದಗಳಲ್ಲಿ ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ, ನಿಮ್ಮ ಉತ್ತಮ ಕಾರ್ಯಗಳಿಂದ ನಮ್ಮಂತಹ ಬಡವರ ಮನ ಗೆದ್ದಿದ್ದೀರಿ ಎಂದರು.
ಈ ವಿಡಿಯೋ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರಿಗೆ ತಲುಪಿದ್ದು, ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
कुछ भावनाओं को शब्द बयान नहीं कर सकते!
देखिए प्रधानमंत्री @NarendraModi जी और हमारे अन्नदाताओं का अटूट बंधन। pic.twitter.com/bLe1Mbt9d4
— Piyush Goyal (@PiyushGoyal) March 30, 2023