ಹೊಸದಿಗಂತ ಡಿಜಿಟಲ್ ಡೆಸ್ಕ್:
ಸರಿಯಾಗಿ ಮಳೆಯಿಲ್ಲದೆ ಕಾಂಗಾಲಾಗಿರುವ ರೈತನಿಗೀಗ ರಾಜ್ಯ ಕಾಂಗ್ರೆಸ್ ಸರಕಾರ ರೈತರನ್ನು ಕಡೆಗಣಿಸುತ್ತಿರುವ ಧೋರಣೆ ಉಸಿರುಗಟ್ಟಿಸುತ್ತಿದೆ. ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ಬೇಸತ್ತ ರೈತನೋರ್ವ ಸಿಎಂ, ಡಿಸಿಎಂ ಇಂಧನ ಸಚಿವರಿಗೆ ಛೀಮಾರಿ ಹಾಕಿರುವ ವಿಡಿಯೋ ಹರಿದಾಡುತ್ತಿದೆ.
ಬೆಳಗಾವಿ ರಾಯಭಾಗ ತಾಲೂಕಿನ ಚಿಂಚಲಿ ಗ್ರಾಮದ ರೈತನೊಬ್ಬ ಕೃಷ್ಣಾನದಿ ದಡದಲ್ಲಿ ನಿಂತು. ಸಿದ್ದರಾಮಯ್ಯ, ಡಿಕೆಶಿ, ಸಚಿವ ಜಾರ್ಜ್‌ಅವರನ್ನು ಹಿಗ್ಗಾಮುಗ್ಗ ತರಾಟೆ ತೆಗೆದುಕೊಂಡಿದ್ದಾರೆ.
ಸರಕಾರ ಮಾಡುವ ಕಿತಾಪತಿಯಿಂದ ರೈತರು ಬಾಯಿ ಬಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಕೃಷ್ಣಾನದಿಯಲ್ಲಿ ನೀರಿದೆ ಆದರೆ ಕರೆಂಟ್ ಇಲ್ಲ. ಹಲ್ಲಿದ್ರೆ ಕಡಲೆಯಿಲ್ಲ, ಕಡೆಯಿದ್ರೆ ಹಲ್ಲಿಲ್ಲ ಎಂಬ ಪರಿಸ್ಥಿತಿಗೆ ನಮ್ಮನ್ನು ತಂದೊಡ್ಡಿದ್ದಾರೆ. ನಿಮ್ಮ ಸರಕಾರ ಬಂದು ಮೂರು ತಿಂಗಳಲ್ಲೇ ನಮಗೆ ಕಷ್ಟದ ಕೂಪಕ್ಕೆ ನೂಕಿದ್ದೀರಿ, ನಿಮಗೇನು ಮಾನ ಮರ್ಯಾದೆ ಇಲ್ವಾ? ನಿಮ್ಮ ಕೈಯಲ್ಲಿ ಆಗಲಿಲ್ಲ ಅಂದ್ರೆ ಹೇಳಿ ರೈತರ ಕೈಗೆ ಒಂದು ತಿಂಗಳು ಅಧಿಕಾರ ಕೊಡಿ, ಹೇಗೆ ನಡೆಸಬೇಕೆಂದು ನಾವು ತೋರಿಸ್ತೇವೆ. ಅಸೆಂಬ್ಲಿಯಲ್ಲಿ ಕುಳಿತು ನಾಟಕ ಮಾಡೋದು ಬಿಟ್ಟು ರೈತರಿಗೆ ಏಳುಗಂಟೆ ಕರೆಂಟ್ ಕೊಡಿ ಎಂದು ಆಕ್ರೋಶ ಹೊರಹಾಕಿದರು.