ಹೊಸದಿಗಂತ ಡಿಜಿಟಲ್ ಡೆಸ್ಕ್:
ಈರುಳ್ಳಿಗೊಂದು ಕಾಲ, ಟೊಮ್ಯಾಟೊಗೊಂದು ಕಾಲ ಆಗೋಯ್ತು. ಇದೀಗ ಬೆಳ್ಳುಳ್ಳಿ ಎಲ್ಲಕ್ಕಿಂತ ದುಬಾರಿ ಆಗಿದೆ.
ಕೆಜಗೆ 1000 ರೂಪಾಯಿವರೆಗೂ ಬೆಳ್ಳುಳ್ಳಿ ಬೆಲೆ ಏರಿಕೆಯಾಗಿದ್ದು, ಬೆಳ್ಳುಳ್ಳಿ ಬೆಳೆ ರಕ್ಷಿಸಲು ರೈತರು ಸಿಸಿ ಕ್ಯಾಮೆರಾಗಳನ್ನು ಬಳಸುತ್ತಿದ್ದಾರೆ.
ಮಧ್ಯಪ್ರದೇಶದ ಚಿಂದ್ವಾಡ ಜಿಲ್ಲೆಯ ಮೊಹ್ಖೇದ್ ಜಿಲ್ಲೆಯಲ್ಲಿ ಬೆಳ್ಳುಳ್ಳಿ ಕಳವು ಆಗುತ್ತಿದ್ದು, ರೈತರು ಸಿಸಿ ಕ್ಯಾಮೆರಾ ಮೊರೆ ಹೋಗಿದ್ದಾರೆ.
ಸೌರಶಕ್ತಿಯಿಂದ ಕಾರ್ಯ ನಿರ್ವಹಿಸುವ ಕ್ಯಾಮೆರಗಳು, ಏನಾದರೂ ಅನುಮಾನಾಸ್ಪದ ಎನಿಸಿದರೆ ಜೋರಾಗಿ ಅಲಾರಾಂ ಸದ್ದು ಮಾಡುತ್ತವೆ. ಹೀಗಾಗಿ ಕಳ್ಳರ ಸಂಖ್ಯೆ ಕಡಿಮೆಯಾಗಿದೆ. ಬೆಳ್ಳುಳಿ ಬೆಳೆಯೋದು ಎಷ್ಟು ಕಷ್ಟವೋ, ಇದೀಗ ಅದನ್ನು ಕಳ್ಳತನ ಆಗದಂತೆ ನೋಡಿಕೊಳ್ಳೋದು ಇನ್ನೂ ಕಷ್ಟ ಅಂತಿದ್ದಾರೆ ರೈತರು