ಹೊಸದಿಗಂತ ಡಿಜಿಟಲ್ ಡೆಸ್ಕ್:
ರೈತರಿಗೆ ಪರಿಹಾರ ನೀಡೋಕೆ ಆರಂಭಿಸಿದ ನಂತರ ಆತ್ಮಹತ್ಯೆಗಳು ಹೆಚ್ಚಾಗ್ತಿದೆ ಎಂದು ವಿವಾದಾತ್ಮಕ ಹೇಳಿದ ನೀಡಿದ್ದ ಸಚಿವ ಶಿವಾನಂದ ಪಾಟೀಲ್ ಇದೀಗ ಮತ್ತೊಮ್ಮೆ ಇಂಥದ್ದೇ ಹೇಳಿಕೆ ನೀಡಿದ್ದಾರೆ.
ಸಾಲ ಮನ್ನಾ ಆಸೆಗಾಗಿ ಬರ ಬರೋಕೆ ರೈತರು ಕಾಯುತ್ತಾರೆ ಎಂದು ಹೇಳಿದ್ದು ವಿವಾದ ಸೃಷ್ಟಿಸಿದೆ. ನೀರು ಪುಕ್ಕಟೆ ಸಿಗುತ್ತದೆ, ಕರೆಂಟ್ ಪುಕ್ಕಟೆ ಸಿಗುತ್ತದೆ.
ಇನ್ನು ಎಷ್ಟೋ ಸಿಎಂಗಳು ಬೆಳೆ ಬೆಳೆಯೋದಕ್ಕೆ ಬೀಜ ಕೂಡ ಫ್ರೀ ಆಗಿ ಕೊಟ್ಟಿದ್ದಾರೆ, ಗೊಬ್ಬರನೂ ಕೊಟ್ಟಿದ್ದಾರೆ. ಇನ್ನು ರೈತರಿಗೆ ಇರೋದು ಒಂದೇ ಆಸೆ, ಮ್ಯಾಲ ಮ್ಯಾಲ ಬರಗಾಲ ಬೀಳಲಿ ಎಂದು, ಯಾಕಂದ್ರೆ ಸಾಲ ಮನ್ನಾ ಆಗುತ್ತದೆ ಎಂದು ಹೇಳಿದ್ದಾರೆ.