ಹೊಸದಿಗಂತ ಡಿಜಿಟಲ್ ಡೆಸ್ಕ್:
‘ದೆಹಲಿ ಚಲೋ’ ರೈತರು ನಡೆಸುತ್ತಿದ್ದ ಪ್ರತಿಭಟನೆ(protest)ಯು ಶುಭ್ಕರಣ್ ಸಿಂಗ್(Shubh Karan Singh) ಸಾವಿನ ಬಳಿಕ ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಇದೀಗ ಮಾರ್ಚ್ 3 ರಂದು ಶುಭ್ಕರಣ್ ಅವರ ಆತ್ಮಕ್ಕೆ ಶಾಂತಿ ಕೋರಿ ಅಂತಿಮ ನಮನ ಸಲ್ಲಿಸಲಾಗುವುದು ಅದರ ಬಳಿಕವಷ್ಟೇ ಪ್ರತಿಭಟನೆ ಕುರಿತು ನಿರ್ಧಾರಕ್ಕೆ ಬರಲಾಗುವುದು ಎಂದು ರೈತರು ತಿಳಿಸಿದ್ದಾರೆ.
ರೈತರೊಂದಿಗೆ ಮಾತುಕತೆಗೆ ಸಿದ್ಧ ರೈತರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ರೈತ ಮುಖಂಡರ ನಡುವೆ ನಾಲ್ಕು ಬಾರಿ ಮಾತುಕತೆ ನಡೆದಿದೆ. ಆದ್ರೆ ಈ ಮಾತಕತೆಗೆ ಇನ್ನೂ ಪರಿಹಾರ ದೊರೆತಿಲ್ಲ, ಐದನೇ ಸುತ್ತಿನ ಮಾತುಕತೆಗೆ ಕೇಂದ್ರ ಸರ್ಕಾರ ಸಿದ್ಧವಾಗಿದೆ. ಧರಣಿ ನಿರತ ರೈತರೊಂದಿಗೆ ಮಾತುಕತೆಗೆ ಸರ್ಕಾರ ಸಿದ್ಧವಿದೆ ಎಂದು ಕೃಷಿ ಸಚಿವ ಅರ್ಜುನ್ ಮುಂಡಾ ಹೇಳಿದ್ದಾರೆ.
ಯುನೈಟೆಡ್ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾದ ಎರಡೂ ವೇದಿಕೆಗಳಿಂದ 6 ಸದಸ್ಯರ ಸಮನ್ವಯ ಸಮಿತಿಯನ್ನು ರಚಿಸಲಾಗುವುದು. ಸಮಿತಿಯ ಹೆಸರುಗಳನ್ನು ನಿರ್ಧರಿಸಲಾಗಿದೆ.ಎರಡೂ ಸಮಿತಿಗಳು ಶುಕ್ರವಾರ ಸಭೆ ಸೇರಲಿವೆ. ಸಮನ್ವಯ ಸಮಿತಿ ಸಂಪರ್ಕಿಸಿದ್ದು, ಚರ್ಚೆ ನಡೆದಿದೆ ಎಂದು ಕಿಸಾನ್ ಸಂಘರ್ಷ ಸಮಿತಿಯ ರಾಜ್ಯ ಮುಖಂಡ ಸತ್ನಾಮ್ ಸಿಂಗ್ ಪನ್ನು ತಿಳಿಸಿದ್ದಾರೆ.
ಫೆಬ್ರವರಿ 20ರಂದು ರೈತ ಮುಖಂಡರು ಎರಡು ದಿನಗಳ ಕಾಲ ವಿರಾಮ ನೀಡಿದ್ದರು. ಫೆಬ್ರವರಿ 23ರಂದು ಮುಂದಿನ ಕಾರ್ಯತಂತ್ರವನ್ನು ರಚಿಸಲಾಗುವುದು ಎಂದಿದ್ದರು. ಮಧ್ಯದಲ್ಲಿ ಪಾದಯಾತ್ರೆಯಲ್ಲಿದ್ದ ಶುಭ್ಕರಣ್ ಎಂಬುವವರ ಮೇಲೆ ಗುಂಡಿನ ದಾಳಿ ನಡೆದಿತ್ತು. ಅದರಲ್ಲಿ ಅವರು ಸಾವನ್ನಪ್ಪಿದ್ದರು. ಅದಾದ ಬಳಿಕ ಯಾತ್ರೆಯನ್ನು ಕೆಲಕಾಲ ಮುಂದೂಡಿದ್ದರು.