ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರದ ವಿರುದ್ದದ ರೈತರ ಪ್ರತಿಭಟನೆ ರೈಲು ಹಳಿಗೆ ತಲುಪಿದ್ದು, ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಕರೆ ನೀಡಿರುವ ‘ರೈಲು ತಡೆ’ ಪ್ರತಿಭಟನೆಯ ಭಾಗವಾಗಿ ರೈತರು ಭಾನುವಾರ ಪಂಜಾಬ್‌ನ ಹಲವೆಡೆ ರೈಲು ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದಾರೆ.
ಪಂಜಾಬ್‌ನ ಅಮೃತಸರ, ಲೂಧಿಯಾನ, ಟರಣ್ ಟರಣ್, ಹೋಶಿಯಾರ್‌ಪುರ, ಫಿರೋಜ್‌ಪುರ, ಫಜಿಲ್ಕಾ, ಸಂಗ್ರೂರ್, ಮಾನ್ಸಾ, ಮೊಗಾ ಮತ್ತು ಬಟಿಂಡಾ ಸೇರಿದಂತೆ 22 ಜಿಲ್ಲೆಗಳ 52 ಸ್ಥಳಗಳಲ್ಲಿ ರೈಲು ಹಳಿಗಳ ಮೇಲೆ ಕುಳಿತುಕೊಂಡು ರೈತರು ಪ್ರತಿಭಟನೆ ನಡೆಸಿದ್ದಾರೆ.
ರೈಲು ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದ ಹಿನ್ನೆಲೆ ಹಲವು ರೈಲುಗಳ ಸಂಚಾರ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುವಂತಾಯಿತು.