ಕಾಳುಮೆಣಸು ಬೆಳೆದ ರೈತರಿಗೆ ಹಿಗ್ಗೋ ಹಿಗ್ಗು: ಕೆಜಿಗೆ 1000 ರೂ.ಗೆ ಏರಿಕೆ ಸಾಧ್ಯತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಾಳುಮೆಣಸು ಬೆಳೆದ ರೈತರಿಗೆ ಖುಷಿ ಸಮಯ ಬಂದಿದ್ದು, ಒಂದು ಕೆಜಿ ಕಾಳುಮೆಣಸಿನ ಬೆಲೆ ಬರೋಬ್ಬರಿ 1000 ರೂ.ಗೆ ಏರಿಕೆ ಸಾಧ್ಯತೆ ಎನ್ನಲಾಗಿದೆ.

ಕಳೆದ ಎರಡು ವರ್ಷಗಳಿಂದ ಶೇಕಡ 40 ರಷ್ಟು ದರ ಏರಿಕೆ ಕಂಡಿರುವ ಕರಿಮೆಣಸು ಪೂರೈಕೆ ಕೊರತೆ ಮತ್ತು ಬೇಡಿಕೆ ಹೆಚ್ಚಳದ ಪರಿಣಾಮ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ವಿಯೆಟ್ನಾಂ, ಬ್ರೆಜಿಲ್​ನಂತಹ ಹಚ್ಚು ಕರಿಮೆಣಸು ಬೆಳೆಯುವ ದೇಶಗಳಲ್ಲಿ ಬೆಳೆ ಪ್ರಮಾಣ ಗಣನೀಯವಾಗಿ ಕುಸಿತವಾಗಿದೆ. ಇದರಿಂದಾಗಿ ಪೂರೈಕೆ ಮೇಲೆ ಹೊಡೆತ ಬಿದ್ದಿದೆ. ಮತ್ತೊಂದೆಡೆ ಬೇಡಿಕೆ ಕೂಡ ಹೆಚ್ಚಾಗಿದೆ. ಕಳೆದ ವರ್ಷ ಬರಗಾಲದಿಂದಾಗಿ ಹೂಬಿಡುವಿಕೆ ವಿಳಂಬವಾಯಿತು ಮತ್ತು ನಂತರ ಹಠಾತ್ ಮಳೆಯಿಂದಾಗಿ ಬೆಳೆಯ ಮೇಲೆ ಪರಿಣಾಮ ಬೀರಿತ್ತು ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!