ದಿಗಂತ ವರದಿ ವಿಜಯಪುರ:
ವಿಜಯದಶಮಿ ನಿಮಿತ್ತ ಗುಮ್ಮಟ ನಗರಿಯಲ್ಲಿ ಭಾನುವಾರ ಗಣವೇಶಧಾರಿಗಳ ಆಕರ್ಷಕ ಪಥಸಂಚಲನ ಹಮ್ಮಿಕೊಳ್ಳಲಾಯಿತು.
ಇಲ್ಲಿನ ಗೋದಾವರಿ ಹೊಟೇಲ್ ಬಳಿಯ ಸ್ಯಾಟ್ ಲೈಟ್ ಬಸ್ ನಿಲ್ದಾಣದಿಂದ ಆರಂಭಗೊಂಡ ಗಣವೇಶಧಾರಿಗಳ ಪಥಸಂಚಲನ, ಶಿವಾಜಿ ವೃತ್ತ, ಸಿದ್ಧೇಶ್ವರ ದೇವಸ್ಥಾನ, ಡೊಬಳೆ ಗಲ್ಲಿ, ವಾಜಪೇಯಿ ಸರ್ಕಲ್, ಗಾಂಧಿ ವೃತ್ತ, ಬಸವೇಶ್ವರ ಹಾಗೂ ಅಂಬೇಡ್ಕರ್ ವೃತ್ತದ ಮೂಲಕ ದರಬಾರ್ ಹೈಸ್ಕೂಲ್ ಮೈದಾನಕ್ಕೆ ತೆರಳಿ, ಸಭೆಯಾಗಿ ಮಾರ್ಪಟ್ಟಿತು.
ಪಥಸಂಚಲನದುದ್ದಕ್ಕೂ ಗಣವೇಶಧಾರಿಗಳ ಮೇಲೆ ಸಾರ್ವಜನಿಕರು ಪುಷ್ಪವೃಷ್ಟಿ ಗೈದು, ಭಾರತ ಮಾತಾಕೀ ಜೈ ಎಂದು ದೇಶಭಕ್ತಿ ಮೆರೆದರು.