Fashion Tips | ನೀವು ದಪ್ಪಗೆ ಕಾಣ್ಬಾರ್ದಾ? ಹಾಗಿದ್ರೆ ಈ ಬಣ್ಣದ ಬಟ್ಟೆಗಳನ್ನು ಅವಾಯ್ಡ್ ಮಾಡಿ!

ಪ್ರತಿಯೊಬ್ಬರೂ ತಮ್ಮ ದೇಹಕ್ಕೆ ಹೊಂದುವ ಬಟ್ಟೆ ಆಯ್ಕೆಮಾಡುತ್ತಾರೆ, ಆದರೆ ಅದರ ಬಣ್ಣದ ಆಯ್ಕೆಯತ್ತ ಗಮನ ಇರುವುದೇ ಇಲ್ಲ. ಕೆಲವೊಮ್ಮೆ ನೀವು ತುಂಬಾ ಫಿಟ್‌ ಆಗಿದ್ದರೂ, ಬಟ್ಟೆಯ ತಪ್ಪು ಬಣ್ಣದ ಆಯ್ಕೆ ನೀವು ದಪ್ಪಗಾಗಿ ಕಾಣುವಂತೆ ಮಾಡುತ್ತದೆ. ಹೀಗಾಗಿ ಬಟ್ಟೆ ಖರೀದಿಸುವಾಗ ಅದರ ವಿನ್ಯಾಸದಷ್ಟೇ ಬಣ್ಣಕ್ಕೂ ಹೆಚ್ಚು ಗಮನ ಹರಿಸುವುದು ಅಗತ್ಯ. ಇನ್ನು ಸ್ಲಿಮ್‌ ಆಗಿ ಕಾಣಬೇಕಾದವರು ಈ ಬಣ್ಣದ ಬಟ್ಟೆಗಳನ್ನು ಖರೀದಿಸದಿದ್ದರೆ ಉತ್ತಮ.

ಬಿಳಿ ಬಣ್ಣ:
ಬಿಳಿಯು ಶುದ್ಧತೆ ಮತ್ತು ಶಾಂತಿಯ ಸಂಕೇತವಾದರೂ, ಬಿಳಿ ಬಣ್ಣ ನಮ್ಮನ್ನು ದಪ್ಪವಾಗಿ ಕಾಣುವಂತೆ ಮಾಡುತ್ತದೆ. ಹೀಗಿರುವಾಗ ನಿಮ್ಮ ದೇಹಕಾರ ಉತ್ತಮವಾಗಿ ಕಾಣುವಂತೆ ಮಾಡಲು ಬಯಸಿದರೆ ಬಿಳಿ ಬಣ್ಣದ ಬಟ್ಟೆ ಧರಿಸುವುದನ್ನು ತಪ್ಪಿಸಿ. ಹಾಗೂ ಇದರ ಬದಲಾಗಿ ತಿಳಿ ನೀಲಿ ಅಥವಾ ತಿಳಿ ಬೂದು ಬಣ್ಣದ ಬಟ್ಟೆ ಆರಿಸಿ.

ಬಿಳಿ ಬಣ್ಣದ ಬಗ್ಗೆ 20 ಅದ್ಭುತ ಸಂಗತಿಗಳು - ದಿ ಫ್ಯಾಕ್ಟ್ ಸೈಟ್

ತಿಳಿ ನೇರಳೆ ಬಣ್ಣ:
ಇದು ಬಹುಪಾಲು ಮಹಿಳೆಯರು ಇಷ್ಟಪಡುವ ಬಣ್ಣ. ಆದರೆ ಇದು ಕೂಡ ದೇಹದ ಹರಡಿದ ರಚನೆಯನ್ನು ಒತ್ತಿ ತೋರಿಸುವ ಬಣ್ಣಗಳಲ್ಲಿ ಒಂದು. ಇದರ ಬದಲು ತಿಳಿ ಹಳದಿ ಅಥವಾ ಗುಲಾಬಿ ಬಣ್ಣ ಆಯ್ಕೆ ಮಾಡಿದರೆ ದೇಹ ಹೆಚ್ಚು ಸ್ಲಿಮ್‌ ಆಗಿ ಕಾಣಬಹುದು.

ನೇರಳೆ ಮತ್ತು ಬಿಳಿ ಮಿಶ್ರಿತ ಬಣ್ಣ ಯಾವುದು? | ಬಣ್ಣದ ಅರ್ಥಗಳು

ಮುತ್ತಿನ ಬಣ್ಣ:
ಹೆಚ್ಚಾಗಿ ಫೆಸ್ಟಿವ್ ಉಡುಪುಗಳಲ್ಲಿ ಬಳಸುವ ಈ ಹೊಳೆಯುವ ಬಣ್ಣವು ಕೂಡ ಬೆಳಕನ್ನು ಹೀರಿಕೊಂಡು ದೇಹದ ಭಾಗಗಳನ್ನು ಹೆಚ್ಚು ತೋರಿಸಬಲ್ಲದು. ಇದರ ಬದಲು ತಿಳಿ ಹಸಿರು ಅಥವಾ ನೀಲಿ ಬಣ್ಣದ ಆಯ್ಕೆ ಹೆಚ್ಚು ಸಮತೋಲನ ನೀಡುತ್ತದೆ.

ಮುತ್ತಿನ ಬಣ್ಣದ ಅರ್ಥ - ಮುತ್ತಿನ ಬಣ್ಣದ ಸಂಕೇತ - ಮುತ್ತಿನ ಆಭರಣ ಸಿಂಗಪುರ

ಕಂದು ಬಣ್ಣ:
ಈ ಬಣ್ಣವನ್ನು ಹೆಚ್ಚು ಜನ ಡೈನಿಂಗ್ ಅಥವಾ ಫಾರ್ಮಲ್ ಉಡುಪುಗಳಿಗೆ ಆಯ್ಕೆಮಾಡುತ್ತಾರೆ. ಆದರೆ ಹೆಚ್ಚು ಗಾಢವಾದ ಕಂದು ಬಣ್ಣ ದೇಹದ ಮೇಲಿನ ತೂಕವನ್ನು ಹೆಚ್ಚು ತೋರಿಸಲು ಕಾರಣವಾಗಬಹುದು. ಬದಲಿಗೆ ತಿಳಿ ಬೂದು ಅಥವಾ ತಿಳಿ ಕಪ್ಪು ಶ್ರೇಷ್ಠ ಆಯ್ಕೆಯಾಗಬಹುದು.

ತಟಸ್ಥದಿಂದ ದಪ್ಪಕ್ಕೆ 12 ಅತ್ಯುತ್ತಮ ಕಂದು ಬಣ್ಣದ ಬಣ್ಣಗಳು

ಕಿತ್ತಳೆ ಬಣ್ಣ:
ಈ ಬಣ್ಣ ಬಟ್ಟೆಯ ವಿಷಯದಲ್ಲಿ, ಅನೇಕ ದೇಹಕಾರಗಳಿಗೆ ಹೊಂದಿಕೆಯಾಗುವುದಿಲ್ಲ. ಏಕೆಂದರೆ ಈ ಬಣ್ಣದ ಬಟ್ಟೆಗಳು ನಿಮ್ಮನ್ನು ದಪ್ಪವಾಗಿ ಕಾಣುವಂತೆಯೂ ಮಾಡುತ್ತದೆ. ಆದ್ದರಿಂದ ಸ್ಲಿಮ್‌ ಆಗಿ ಕಾಣಬೇಕೆಂದರೆ ಈ ಬಣ್ಣದ ಬಟ್ಟೆ ಧರಿಸಬೇಡಿ. ಇದರ ಬದಲು, ತಿಳಿ ಕಿತ್ತಳೆ ಅಥವಾ ತಿಳಿ ಹಳದಿ ಬಣ್ಣವನ್ನು ಆರಿಸಿ.

ಕಿತ್ತಳೆ ಬಣ್ಣ - ಇತಿಹಾಸ, ಅರ್ಥ ಮತ್ತು ಸಂಗತಿಗಳು | ಹಂಟರ್ ಲ್ಯಾಬ್

ಬಟ್ಟೆಯ ಶೈಲಿಯಷ್ಟೆ ಅಲ್ಲ ಬಣ್ಣದ ಆಯ್ಕೆಯೂ ದೇಹದ ದೃಷ್ಠಿಕೋನವನ್ನು ನಿರ್ಧರಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಸ್ಲಿಮ್ ಆಗಿ ಕಾಣಲು ಉದ್ದೇಶವಿದ್ದರೆ ಈ ಬಣ್ಣಗಳಿಂದ ದೂರವಿರುವುದು ಉತ್ತಮ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!