ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಸಿಗೆಯಲ್ಲಿ ಪ್ರಯಾಣಿಸುವ ಯುವತಿಯರು ಬಿಸಿಲಿನಲ್ಲಿ ತಂಪಾದ ಮತ್ತು ಆರಾಮದಾಯಕವಾದ ಫ್ಯಾಷನ್ ಉಡುಪುಗಳನ್ನು ಧರಿಸಲು ಬಯಸುತ್ತಾರೆ. ಹಾಗಿದ್ರೆ ಈ ಸರಳ ಸಲಹೆಗಳನ್ನು ಅನುಸರಿಸಿದರೆ ಸಾಕು.
ನೀವು ಧರಿಸುವ ಬಟ್ಟೆಗಳು ಬೇಸಿಗೆಗೆ ಸೂಕ್ತವಾಗಿರಬೇಕು. ಎರಡನೆಯದು ಅಂಟಿಕೊಳ್ಳಬಾರದು. ಆರಾಮದಾಯಕ ಉಡುಪುಗಳಿಗೆ ಆದ್ಯತೆ ನೀಡಿ. ಸರಳವಾದ ಸಾಂದರ್ಭಿಕ ಉಡುಪುಗಳನ್ನು ಆರಿಸಿ. ಸೀರೆ ಹಾಗೂ ಗಾಗ್ರ, ಲೆಹೆಂಗಾದಂತಹ ಉಡುಪುಗಳಿಗೆ ವಿದಾಯ ಹೇಳಿ.
ನಿಮ್ಮ ಪ್ರವಾಸದ ಸಮಯದಲ್ಲಿ ಸಾಧ್ಯವಾದಷ್ಟು ಶೇಡ್ಸ್, ಕಲರ್ಸ್ ಆಯ್ಕೆಮಾಡಿ. ಪೀಚ್, ಬೇಬಿ ಪಿಂಕ್, ನೀಲಿ ಮತ್ತು ಲ್ಯಾವೆಂಡರ್‌ನಂತಹ ಪಾಸ್ಟೆಲ್ ಶೇಡ್ ಬಣ್ಣಗಳನ್ನು ಹೈಲೈಟ್ ಮಾಡಿ.
ಧರಿಸಿದಾಗ ಗಾಳಿಯಾಡುವಂತಹ ಫ್ಯಾಬ್ರಿಕ್ ಹೊಂದಿರುವ ಡ್ರೆಸ್‌ಗಳಿಗೆ ಸೈ ಹೇಳಿ. ಉದಾಹರಣೆಗೆ., ಕಾಟನ್, ಲೆನಿನ್ ಹಾಗೂ ಇಕೋ ಫ್ರೆಂಡ್ಲಿಯಾಗಿರುವಂತಹ ಫ್ಯಾಬ್ರಿಕ್‌ನ ಮೊರೆ ಹೋಗಿ.
ಕಾಲರ್ ನೆಕ್, ಟೈಟ್ ಫಿಟ್ಟಿಂಗ್, ಮೈಗೆ ಅಂಟಿಕೊಳ್ಳುವಂತಹ ಹಗ್ಗಿಂಗ್ ಡ್ರೆಸ್, ಫುಲ್ ಸ್ಲೀವ್ ಸಲ್ವಾರ್, ಲಾಂಗ್ ಸಲ್ವಾರ್ ಸೇರಿದಂತೆ ಅಡಿಯಿಂದ ಮುಡಿಯವರೆಗೆ ಗಾಳಿಯಾಡದಂತೆ ಕ್ಲೋಸ್ ಆಗಿರುವಂತಹ ಉಡುಪುಗಳು ಬೇಸಿಗೆ ಟ್ರಾವೆಲ್ ಟೈಮ್‌ಗೆ ಯಾವುದೇ ಕಾರಣಕ್ಕೂ ಆಯ್ಕೆ ಮಾಡಬೇಡಿ.