ಇಂದು ವಿಮಾನ ನಿಲ್ದಾಣಗಳು ಸೌಂದರ್ಯ, ಫ್ಯಾಷನ್ ಮತ್ತು ವೈಯಕ್ತಿಕ ಶೈಲಿಯ ಪ್ರದರ್ಶನ ಕೇಂದ್ರಗಳಾಗಿ ಮಾರ್ಪಟ್ಟಿವೆ. ಸೆಲೆಬ್ರಿಟಿಗಳು ತಮ್ಮ ಟ್ರಾವೆಲ್ ಶೈಲಿಯ ಮೂಲಕ ಗಮನ ಸೆಳೆಯುತ್ತಿದ್ದಾರೆ. ಸಾಮಾನ್ಯ ಪ್ರಯಾಣಿಕರೂ ಈಗ ತಮ್ಮ ಲುಕ್ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಆದರೆ, ಟ್ರಾವೆಲ್ ಮಾಡೋವಾಗ ಕಂಫರ್ಟಬಲ್ ಮುಖ್ಯ. ಬಟ್ಟೆಯ ಆಯ್ಕೆ ತೊಂದರೆ ನೀಡಬಾರದು, ಕಾಲುಗಳಿಗೆ ಕಿರಿಕಿರಿಯಾಗಬಾರದು ಮತ್ತು ಬಗ್ಗುವಾಗ, ಕುಳಿತುಕೊಳ್ಳುವಾಗ ಇರಿಟೇಷನ್ ಆಗ್ಬಾರ್ದು. ಈ ಹಿನ್ನೆಲೆಯಲ್ಲಿ ವಿಮಾನ ಪ್ರಯಾಣಕ್ಕೆ ಅನುಕೂಲವಾಗುವ ಮತ್ತು ಸ್ಟೈಲಿಷ್ ಆಗಿರುವ ಕೆಲವು ಫ್ಯಾಷನ್ ಆಯ್ಕೆಗಳನ್ನು ಇಲ್ಲಿದೆ:
Flared ಬಾಟಮ್ಸ್ ಅಥವಾ ಕಾರ್ಗೋ ಪಾಂಟ್ಸ್
ಇತ್ತೀಚಿನ ಟ್ರೆಂಡ್‌ಗೆ ಅನುಗುಣವಾಗಿ Flared ಬಾಟಮ್ಸ್ ಅಥವಾ ಕಾರ್ಗೋ ಪಾಂಟ್ಸ್ ಗಳು ಹೆಚ್ಚು ಜನಪ್ರಿಯವಾಗಿವೆ. ಈ ಪಾಂಟ್ಸ್ ಗಳು ಟೈಟ್ ಜೀನ್ಸ್ ಗಿಂತ ಹೆಚ್ಚು ಕಂಫರ್ಟಬಲ್ ಮತ್ತು ಆಕರ್ಷಕವಾಗಿವೆ. ದೀರ್ಘ ಪ್ರಯಾಣದ ವೇಳೆ ರಕ್ತಸಂಚಾರಕ್ಕೇ ಅಡಚಣೆ ಬಾರದಂತೆ ಆರಾಮವನ್ನು ನೀಡುತ್ತವೆ. ಇದರಿಂದ ನೀವು ಸ್ಟೈಲಿಷ್ ಆಗಿಯೂ ಕಾಣಬಹುದು.
ಹಗುರವಾದ ಉಡುಪುಗಳು
ವಿಮಾನ ಒಳಗೆ ತಂಪಾಗಿರುತ್ತದೆ. ಆದ್ದರಿಂದ ಹೊರಗೆ ಬಿಸಿಲು ಇದ್ದರೂ, ಒಳಗೆ ಬೆಚ್ಚಗಿನ ಕಾರ್ಡಿಗನ್ ಅಥವಾ ಲೈಟ್ ವೇಟ್ ಜಾಕೆಟ್ ಇಟ್ಟುಕೊಳ್ಳುವುದು ಒಳ್ಳೆಯದು. ನೀವು ಅವಶ್ಯಕತೆ ಅನುಸಾರ ಬದಲಾಯಿಸಬಹುದಾದ ಬಟ್ಟೆ ಆಯ್ಕೆ ಮಾಡಿಕೊಂಡರೆ ಪ್ರಯಾಣ ಸುಲಭವಾಗುತ್ತದೆ.
ಕೋ-ಆರ್ಡ್ ಸೆಟ್ ಉತ್ತಮ ಆಯ್ಕೆ
jump suit ಬದಲಾಗಿ ಕೋ-ಆರ್ಡ್ ಸೆಟ್ ಆಯ್ಕೆ ಮಾಡುವುದು ಉತ್ತಮ. ಈ ಬಟ್ಟೆಗಳು ನಿಮ್ಮ ಲುಕ್ ಗೆ ಆಕರ್ಷಣೆಯೊಂದಿಗೆ ಆರಾಮವನ್ನು ಒದಗಿಸುತ್ತವೆ. ಜೊತೆಗೆ ವಾಶ್ ರೂಮ್ ಬಳಕೆಯ ಸಮಯದಲ್ಲಿ ತೊಂದರೆ ಕೊಡಲ್ಲ.
ಟೋಟ್ ಬ್ಯಾಗ್ ಬಳಸಿ
ಲಾರ್ಜ್ ಟೋಟ್ ಬ್ಯಾಗ್‌ಗಳು ಪ್ರಯಾಣದ ಅವಶ್ಯಕ ವಸ್ತುಗಳನ್ನು ಒಟ್ಟಾಗಿ ಕೊಂಡೊಯ್ಯಲು ಉಪಯುಕ್ತ. ಅದರ ಜೊತೆಗೆ ಕ್ಲಾಸಿ ಲುಕ್ ಕೂಡ ನೀಡುತ್ತದೆ. ಮೇಕಪ್, ಫೋನ್ ಚಾರ್ಜರ್, ಪಾಸ್‌ಪೋರ್ಟ್ ಎಲ್ಲವನ್ನೂ ಒಂದೇ ಬ್ಯಾಗ್‌ನಲ್ಲಿ ಇಟ್ಟುಕೊಳ್ಳಬಹುದು.
ಸ್ಲಿಪ್-ಆನ್ ಶೂಗಳ ಆರಾಮ
ಶೂ ಆಯ್ಕೆ ಕೂಡ ಅಷ್ಟೇ ಮಹತ್ವದ್ದು. ವಿಮಾನ ತಪಾಸಣೆ ವೇಳೆ ಸುಲಭವಾಗಿ ಕಳಚಲು ಸಾಧ್ಯವಾಗುವ, ಇನ್ಸುಲೇಷನ್ ಉತ್ತಮವಿರುವ ಸ್ಲಿಪ್-ಆನ್ ಶೂಗಳು ಅತ್ಯುತ್ತಮ. ಚಪ್ಪಲಿ ಅಥವಾ ಹೀಲ್ಸ್ ಬದಲು ಇವು ಪ್ರಯಾಣದ ಹೊತ್ತಿನಲ್ಲಿ ಹೆಚ್ಚು ಆರಾಮವನ್ನು ನೀಡುತ್ತವೆ.