ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾರ್ಕಳ-ಪಡುಬಿದ್ರಿ ಸಂಪರ್ಕದ ರಾಜ್ಯ ಹೆದ್ದಾರಿ ನಂದಿಕೂರು ಇಂಡಸ್ಟ್ರಿಯಲ್ ಏರಿಯಾದ ಮುದರಂಗಡಿ ಕ್ರಾಸ್ ಬಳಿ ಬೈಕ್ – ಬಸ್‌ನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ.
ಮೃತ ಯುವಕನನ್ನು ಕಾರ್ಕಳ ಅಜೆಕಾರು ಬೊಂಡು ಕುಮೇರಿ ನಿವಾಸಿ ಅಶ್ವಿತ್ ಶೆಟ್ಟಿ(೩೪) ಎಂದು ಗುರುತಿಸಲಾಗಿದೆ.
ಯೂಟ್ಯೂಬ್ ಬ್ಲಾಗರ್ ಆಗಿರುವ ಅಶ್ವಿನ್ ಶೆಟ್ಟಿ, ಗೂಡ್ಸ್ ಟೆಂಪೋ ಬಾಡಿಗೆ ಮಾಡಿಸುತ್ತಿದ್ದರು. ಇತ್ತೀಚಿಗೆ ಹೊಸ ಬೈಕೊಂದನ್ನು ಖರೀದಿಸಿದ್ದು, ಅದರ ಸರ್ವಿಸ್‌ಗಾಗಿ ಮಂಗಳೂರಿಗೆ ತೆರಳುತ್ತಿದ್ದ ಸಂದರ್ಭ ರಸ್ತೆ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ.
ಅಪಘಾತದಿಂದ ತೀವ್ರವಾಗಿ ಗಾಯಗೊಂಡಿದ್ದ ಅಶ್ವಿನ್ ಅವರನ್ನು ಆಸ್ಪತ್ರೆಗೆ ಸಾಗಿಸುವ ಹಾದಿಯಲ್ಲಿ ಮೃತಪಟ್ಟಿದ್ದು, ಘಟನಾ ಸ್ಥಳಕ್ಕೆ ಪಡುಬಿದ್ರಿ ಪೊಲೀಸರು ಆಗಮಿಸಿ ಪರಿಶೀಲಿಸಿದ್ದು, ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.