ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೋಕಾಕ ತಾಲೂಕಿನ ದುಂಡನಟ್ಟಿ ಜಂಕ್ಷನ್ ಬಳಿ ಬೈಕ್ ಹಾಗೂ ಎಸ್ ಆರ್ ಎಸ್ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಮಲ್ಲಿಕಾರ್ಜುನ್ ಸತ್ತೇಪ್ಪ ಮನ್ನಿಕೇರಿ (26) ಅಪಘಾತದಲ್ಲಿ ಮೃತಪಟ್ಟ ಬೈಕ್ ಸವಾರ.
ಬುಧವಾರ ತಡರಾತ್ರಿ ದುಂಡನಟ್ಟಿ ಜಂಕ್ಷನ್ ಬಳಿ ಅಪಘಾತ ಸಂಭವಿಸಿದ್ದು. ಬೈಕ್ ಸವಾರನ ತಲೆಯ ಮೇಲೆ ಬಸ್ ಹರಿದು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಈ ಘಟನೆ ಕುರಿತು ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.