ಮಗನಿಗೆ ಹೃದಯಾಘಾತದ ಸುದ್ದಿ ಕೇಳಿ ತಂದೆಗೂ ಹಾರ್ಟ್‌ ಅಟ್ಯಾಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮಗ ಹೃದಯಾಘಾತದಿಂದ ಸಾವಾಗಿರುವ ಸುದ್ದಿ ಕೇಳಿ, ತಂದೆಯೂ ಹೃದಯಾಘಾತದಿಂದ ಮೃತಪಟ್ಟಿರುವ ಹೃದಯಾವಿದ್ರಾವಕ ಘಟನೆ ಹಾವೇರಿ ಜಿಲ್ಲೆಯ ಬಸವೇಶ್ವರ ನಗರದಲ್ಲಿ ನಡೆದಿದೆ.

ಡಾ. ವಿನಯ್ ಗುಂಡಗಾವಿ (38) ಹೃದಯಾಘಾತದಿಂದ ಸಾವನ್ನಪ್ಪಿದ್ದ ಮಗ. ಡಾ. ವೀರಭದ್ರಪ್ಪ ಗುಂಡಗಾವಿ (68) ಮೃತ ತಂದೆ. ಒಂದೇ ದಿನ ತಂದೆ ಮಗ ಮೃತಪಟ್ಟಿದ್ದು, ವೃತ್ತಿಯಲ್ಲಿ ಇಬ್ಬರು ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು

ಮಗನ ಸಾವಿನ ಸುದ್ದಿ ಕೇಳಿದ ತಂದೆ ಡಾ.ವೀರಭದ್ರಪ್ಪ ಗುಂಡಗಾವಿಗೆ ಹಾವೇರಿಯಲ್ಲಿ ಹೃದಯಾಘಾತವಾಗಿದೆ. ಹೃದಯಾಘಾತದಿಂದ ತಂದೆಯೂ ಕೊನೆಯುಸಿರೆಳೆದಿದ್ದಾರೆ. ಮಗ ಡಾ. ವಿನಯ ಹುಬ್ಬಳ್ಳಿಯಲ್ಲಿ  ವೈದ್ಯರಾಗಿ ಕೆಲಸ ಮಾಡುತ್ತಿದ್ದರು. ತಂದೆ ಡಾ.ವೀರಭದ್ರಪ್ಪ ಹಾವೇರಿಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದರು. ತಂದೆ ಮತ್ತು ಮಗ ಯಾವಾಗಲೂ ಅತ್ಯಂತ ಪ್ರೀತಿಯಿಂದಲೆ ಇರುತ್ತಿದ್ದರು. ಹೀಗಾಗಿ ಮಗ ಡಾ.ವಿನಯನ ಸಾವಿನ ಸುದ್ದಿ ಕೇಳಿದ ತಂದೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!