ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಸ್ಥಾನದ ಸಿರೋಹಿ ಜಿಲ್ಲೆಯ ಅಬು ರೋಡ್ ರೈಲ್ವೆ ನಿಲ್ದಾಣದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ.
ರೈಲು ಹತ್ತುವಾಗ ತಂದೆ-ಮಗಳು ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ. ಭೀಮಾರಾವ್ ಎನ್ನುವವರು ಪತ್ನಿ ಹಾಗೂ ತಮ್ಮ ಅವಳಿ ಮಕ್ಕಳ ಜೊತೆ ಪಾಲಿ ಜಿಲ್ಲೆಯ ಫಲ್ನಾಗೆ ಹೊರಟಿದ್ದರು.
ಸಬರಮತಿ-ಜೋಧ್ಪುರ ಎಕ್ಸ್ಪ್ರೆಸ್ನಲ್ಲಿ ಜನಜಂಗುಳಿ ಹೆಚ್ಚಾಗಿದ್ದು, ರೈಲು ಹತ್ತುವಾಗ ಜಾರಿ ಬಿದ್ದಿದ್ದಾರೆ, ಈ ವೇಳೆ ಐದು ವರ್ಷದ ಮಗಳು ಮೋನಿಕಾಳನ್ನು ಭೀಮಾರಾವ್ ಎತ್ತಿಕೊಂಡಿದ್ದರು.
ತಕ್ಷಣವೇ ಜನರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅವರು ಇದಾಗಲೇ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಗಂಟೆ ತಡವಾದರೂ ಪರವಾಗಿಲ್ಲ, ಜಾಗ್ರತೆಯಿಂದ ಪ್ರಯಾಣಿಸಿ, ಜೀವ ಉಳಿದರೆ ಸಾಕಷ್ಟು ರೈಲು ಪ್ರಯಾಣ ಮಾಡಬಹುದಲ್ಲವೆ?