ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿದ್ದೆ ಮಾಡಲು ಬಿಡುತ್ತಿಲ್ಲ ಜೋರಾಗಿ ಅಳುತ್ತಿದೆ ಎಂದು ತನ್ನ ಕಂದನನ್ನೇ ಎತ್ತಿ ಗೋಡೆಗೆ ತಂದೆ ಎಸೆದಿದ್ದು, ಮಗು ಮೃತಪಟ್ಟಿದೆ.
ಧಾರವಾಡದಲ್ಲಿ ಒಂದು ವರ್ಷದ ಮಗು ಶ್ರೇಯಾಳನ್ನು ತಂದೆಯೇ ಹೀನಾಯವಾಗಿ ಕೊಂದಿದ್ದಾನೆ. ಮಲಗಿದ್ದ ವೇಳೆ ಶ್ರೇಯಾ ಅಳುತ್ತಿದ್ದದಕ್ಕೆ ಸಿಟ್ಟಿಗೆದ್ದ ಪಾಪಿ ತಂದೆ ಮಗುವನ್ನು ಗೋಡೆಗೆ ಎಸೆದಿದ್ದಾನೆ.
ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ. ಪ್ರೀತಿಯಿಂದ ಹೆತ್ತು, ದಿನ ರಾತ್ರಿ ಎನ್ನದೇ ನಿದ್ದೆಗೆಟ್ಟು ಮಗುವನ್ನು ನೋಡಿಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಪೊಲೀಸರು ತಂದೆಯನ್ನು ಬಂಧಿಸಿದ್ದಾರೆ.