ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಪಾಕ್ ನಡುವೆ ಕದನ ವಿರಾಮವಿದ್ದರೂ ಪಾಕಿಸ್ತಾನ ಸೇನೆ ರಾವಲ್ಪಿಂಡಿಯಲ್ಲಿರುವ ತನ್ನ ಪ್ರಧಾನ ಕಚೇರಿಯನ್ನು (GHQ) ರಾಜಧಾನಿ ಇಸ್ಲಾಮಾಬಾದ್ಗೆ ಶಿಫ್ಟ್ ಮಾಡಲು ಮುಂದಾಗುತ್ತಿದೆ.
ಸದ್ಯ ಪಾಕಿಸ್ತಾನದ ಸೇನಾ ಜನರಲ್ ಪ್ರಧಾನ ಕಚೇರಿ(GHQ) ರಾವಲ್ಪಿಂಡಿಯ ಚಕ್ಲಾಲಾದ ನೂರ್ ಖಾನ್ ವಾಯು ನೆಲೆಯ ಬಳಿಯಿದೆ. ಮೇ 10 ರಂದು ಭಾರತ ಪಾಕ್ ವಾಯುನೆಲೆಯಗಳ ಮೇಲೆ ಭೀಕರ ವಾಯುದಾಳಿ ನಡೆಸಿತು.
ಹೀಗಾಗಿ ಭವಿಷ್ಯದಲ್ಲಿ ಭಾರತ ದಾಳಿ ಮಾಡಬಹುದು ಎಂಬ ಭೀತಿ ಎದುರಿಸುತ್ತಿರುವ ಪಾಕಿಸ್ತಾನ ಸೇನೆ ತನ್ನ ಪ್ರಧಾನ ಕಚೇರಿಯನ್ನು ಇಸ್ಲಾಮಾಬಾದ್ಗೆ ಸ್ಥಳಾಂತರಿಸಲು ಮುಂದಾಗುತ್ತಿದೆ ಎಂದು ವರದಿಯಾಗಿದೆ.
ಇಸ್ಲಾಮಾಬಾದ್ನಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿರುವ ರಾವಲ್ಪಿಂಡಿಯ ಚಕ್ಲಾಲಾ ನೂರ್ ಖಾನ್ ವಾಯುನೆಲೆಯು ಪಾಕಿಸ್ತಾನದ GHQ ಪಕ್ಕದಲ್ಲಿದೆ ಮತ್ತು ಪ್ರಮುಖ ಸಾರಿಗೆ ವಿಮಾನಗಳು, ಕಣ್ಗಾವಲು ವ್ಯವಸ್ಥೆಗಳು ಮತ್ತು ಇಂಧನ ತುಂಬುವ ಸ್ಕ್ವಾಡ್ರನ್ಗಳನ್ನು ಹೊಂದಿದೆ.
ಭಾರತದ ದಾಳಿಗೆ ಬೆದರಿದ ಪಾಕ್ ಸೇನಾ ಮುಖ್ಯಸ್ಥ ಜನರಲ್ ಅಸಿಮ್ ಮುನೀರ್ ಜೀವಭಯದಿಂದ ಸೇನಾ ಬಂಕರ್ ಒಳಗಡೆ ಅಡಗಿದ್ದ ವಿಚಾರ 4 ದಿನ ಹಿಂದೆ ಬೆಳಕಿಗೆ ಬಂದಿತ್ತು.