ಹೊಸದಿಗಂತ, ಹುಬ್ಬಳ್ಳಿ:
ಅಯೋಧ್ಯೆ ರಾಮಮಂದಿರ ವಿಚಾರದಲ್ಲಿ ಯಾರು ರಾಜಕಾರಣ ಮಾಡುತ್ತಿದ್ದಾರೆ ಎಲ್ಲರಿಗೂ ಗೊತ್ತಿದೆ. ಎಲ್ಲಿ ಅಲ್ಪಸಂಖ್ಯಾತರ ಮತ ಕಳೆದುಕೊಳ್ಳುತ್ತೇವೆ ಎಂಬುವುದಾಗಿ ಕಾಂಗ್ರೆಸ್ ಉದ್ಘಾಟನೆ ಬರುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಚಾಟಿ ಬೀಸಿದ್ದಾರೆ.
ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಮಮಂದಿರ ಪ್ರತಿಷ್ಠಾನ ಟ್ರಸ್ಟ್ ಸಮಿತಿಯು ಎಲ್ಲರಿಗೂ ಆಹ್ವಾನ ನೀಡಿದೆ. ಸಹಜ ವಾಗಿ ಸ್ವೀಕರಿಸಿ ಕಾಂಗ್ರೆಸ್ ನವರು ಬಂದಿದ್ದರೆ ಇಷ್ಟೊಂದು ಚರ್ಚೆ ಆಗುತ್ತಿರಲಿಲ್ಲ ಎಂದರು.
ಎಲ್ಲಿ ಮತಗಳ ಕಳೆದುಕೊಳ್ಳುತ್ತೇವೆ ಎಂಬ ವಿಚಾರ ಅವರದ್ದಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಈ ರೀತಿ ಮಾತನಾಡಬಾರದು ಎಂದು ಹೇಳಿದರು. ಅಲ್ಲಿ ಹೋದರೆ ಈ ವರ್ಗದ ಮತಗಳು ನಮಗೆ ನಷ್ಟ ಆಗಬಹುದು ಅಂತ ವಿಚಾರ ಮಾಡ್ತಿದ್ದೀರಿ. ಈ ಬಗ್ಗೆ ನಾವು ಪ್ರತಿಕ್ರಿಯೆ ನೀಡಲು ಇಷ್ಟ ಪಡುವುದಿಲ್ಲ. ಕಾಂಗ್ರೆಸ್‌ನವರು ಬಂದ್ರೆ ಸಂತೋಷ, ಇಲ್ಲವಾದಲ್ಲಿ ಏನು ಮಾಡಲಾಗುವುದಿಲ್ಲ. ಜನರೇ ಇದಕ್ಕೆ ಉತ್ತರ ನೀಡುತ್ತಾರೆ ಎಂದರು.