ಫೆಡರಲ್ ಬ್ಯಾಂಕ್‌ನಿಂದ ಇಕಾಮ್‌ ಕಾರ್ಡ್ ವಹಿವಾಟುಗಳಿಗೆ ಬಯೊಮೆಟ್ರಿಕ್‌ ವ್ಯವಸ್ಥೆ,ಭಾರತದಲ್ಲಿ ಇದೇ ಮೊದಲು! 

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಪ್ರಮುಖ ಖಾಸಗಿ ಬ್ಯಾಂಕ್ ಆಗಿರುವ ಫೆಡರಲ್ ಬ್ಯಾಂಕ್ ಫಿನ್‌ಟೆಕ್‌ ಪಾಲುದಾರರಾದ M2P ಮತ್ತು ಮಿಂಕಾಸುಪೇ (MinkasuPay)  ಜೊತೆಗೂಡಿ ಭಾರದತದಲ್ಲಿ ಮೊದಲ ಬಾರಿಗೆ ಇ ಕಾಮರ್ಸ್ ಕಾರ್ಡ್ ವಹಿವಾಟುಗಳಿಗೆ ಬಯೊಮೆಟ್ರಿಕ್‌ ದೃಢೀಕರಣ ವ್ಯವಸ್ಥೆಯನ್ನು ಪರಿಚಯಿಸಿದೆ. ಗ್ರಾಹಕರು ಈಗ ಆನಲೈನ್‌ ಖರೀದಿ ಸಮಯದಲ್ಲಿ ಬೆರಳಚ್ಚು ಅಥವಾ ಮುಖ ಚರ್ಯೆ ಗುರುತಿನ ( ಫೇಸ್‌ ಐಡಿ) ಮೂಲಕ ವಹಿವಾಟು ನಡೆಸಬಹುದಾಗಿದೆ.ಈ ವ್ಯವಸ್ಥೆ ಸುರಕ್ಷತೆ ಜೊತೆಗೆ ವಹಿವಾಟಿನ ವೇಗ ಹಾಗೂ ಬಳಕೆದಾರರ ಅನುಭವವನ್ನು ಕೂಡ ಎತ್ತರಿಸುತ್ತದೆ.
ಈ ಬಯೊಮೆಟ್ರಿಕ್ ವ್ಯವಸ್ಥೆಯನ್ನು ಒಟಿಪಿ ವ್ಯವಸ್ಥೆಗೆ ಬದಲಿಯಾಗಿ ಸೃಷ್ಟಿಸಲಾಗಿದ್ದು ವಹಿವಾಟಿನ ಸಮಯವನ್ನು 3- 4 ಸೆಕೆಂಡ್‌ಗೆ ತಗ್ಗಿಸಿದೆ. ಇದು ಸರಳತೆಯ ಜೊತೆಗೆ ಸುರಕ್ಷತೆ ಯ ಮಾದರಿಯಲ್ಲಿ ರೂಪುಗೊಳಿಸಲಾಗಿದ್ದು ಬಳಕೆದಾರರಿಗೆ ತಡೆರಹಿತ ಸೇವೆ ಕಲ್ಪಿಸಲಿದೆ.
ಈ ಕುರಿತು ಮಾತನಾಡಿದ ಫೆಡರಲ್ ಬ್ಯಾಂಕ್‌ನ ಗ್ರಾಹಕ ಬ್ಯಾಂಕಿಂಗ್ ರಾಷ್ಟ್ರೀಯ ಮುಖ್ಯಸ್ಥ ವಿರಾಟ್ ಸುನಿಲ್ ದಿವಾಂಜಿ “ ಈ ಹೊಸ ಸೌಲಭ್ಯ ತಂತ್ರಜ್ಞಾನ ಅಪ್‌ಗ್ರೇಡ್‌ಗೂ ಮೀರಿದ್ದಾಗಿದೆ. ಇದು ನಮ್ಮ ಗ್ರಾಹಕರ ಬ್ಯಾಂಕಿಂಗ್‌ ಅನುಭವವನ್ನು ಬಿಂಬಿಸುತ್ತದೆ. ಬಯೊಮೆಟ್ರಿಕ್ ದೃಢೀಕರಣವು ಗ್ರಾಹಕರಿಗೆ ಸಯರಕ್ಷತೆ ಹಾಗೂ ಸರಳ ವಹಿವಾಟಿನ ಅನುಭವ ನೀಡಿದೆ. ಗ್ರಾಹಕ ಸ್ನೇಹಿ ಸೇವೆ ಹಾಗೂ ಸುರಕ್ಷತೆಯನ್ನು ಒಗಿಸುವುದು ಫೆಡರಲ್ ಬ್ಯಾಂಕ್‌ನ ಆದ್ಯತೆಯಾಗಿದೆ. M2P ಮತ್ತು MinkasuPay ಪಾಲುದಾರರೊಂದಿಗೆ ಜೊತೆಗೂಡಿ ಸಮಸ್ಯೆರಹಿತ ಡಿಜಿಟಲ್‌ ವಹಿವಾಟು ಸೃಷ್ಟಿಸುವುದು ನಮ್ಮ ಗುರಿ” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಈ ಸಹಯೋಗವು M2P ಎಂದರೆ ಏನು ಎಂಬುದರ ಪರಿಪೂರ್ಣ ಪ್ರತಿಬಿಂಬವಾಗಿದೆ – ಬಳಕೆದಾರರ ಅನುಭವವನ್ನು ಹೆಚ್ಚಿಸುವ ಸುರಕ್ಷಿತ, ಸ್ಕೇಲೆಬಲ್ ಮೂಲಸೌಕರ್ಯವನ್ನು ನಿರ್ಮಿಸುವುದು. ಇ-ಕಾಮರ್ಸ್ ಕಾರ್ಡ್ ವಹಿವಾಟುಗಳಿಗಾಗಿ ದೇಶದ ಮೊದಲ ಬಯೋಮೆಟ್ರಿಕ್ ದೃಢೀಕರಣವನ್ನು ಸಕ್ರಿಯಗೊಳಿಸುವುದು ನಮಗೆ ಹೆಮ್ಮೆಯ ಮೈಲಿಗಲ್ಲು. ಫೆಡರಲ್ ಬ್ಯಾಂಕ್ ಮತ್ತು ಮಿಂಕಾಸುಪೇ ಜೊತೆಗಿನ ಪಾಲುದಾರಿಕೆಯಲ್ಲಿ, ನಾವು ಕೇವಲ ಹೊಸತನವನ್ನು ಮಾಡುತ್ತಿಲ್ಲ – ಡಿಜಿಟಲ್ ಪಾವತಿಗಳಲ್ಲಿ ನಂಬಿಕೆ ಮತ್ತು ಅನುಕೂಲತೆಯು ಹೇಗೆ ಸಹಬಾಳ್ವೆ ನಡೆಸಬಹುದು ಎಂಬುದನ್ನು ನಾವು ಮರುಕಲ್ಪಿಸುತ್ತಿದ್ದೇವೆ.” ಎಂದು M2P ಪಿನ್‌ಟೆಕ್ ಸಹ -ಸಂಸ್ಥಾಪಕ ಮಧುಸೂದನನ್‌ ಆರ್ ಹೇಳಿದರು.
ಮಿಂಕಾಸುಪೇ ಸಿಇಒ ಅನ್ಬು ಗೌಂಡರ್  ಅವರು ಭವಿಷ್ಯದ ಬಗ್ಗೆ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು: “ನಾವು  ಬಯೋಮೆಟ್ರಿಕ್ ದೃಢೀಕರಣದ ಪ್ರತಿಪಾದಕರು. ಎಲ್ಲಾ ಪಾವತಿ ವಹಿವಾಟುಗಳಿಗೆ 2-ಅಂಶ ದೃಢೀಕರಣದ ಮೂಲಕ  ಉತ್ತಮ ಹಾಗೂ ಅತ್ಯಂತ ಸುರಕ್ಷಿತ ವಹಿವಾಟು ಕಲ್ಪಿಸುವ ಉದ್ದೇಶ ಹೊಂದಿದ್ದೇವೆ. ಫೆರಲ್ ಬ್ಯಾಂಕ್‌ ಮತ್ತು M2P ಜೊತೆಗೂಡಿ ಮಾರುಕಟ್ಟೆಗೆ ಇಂತಹ ಉತ್ತಮ ತಂತ್ರಜ್ಞಾನವನ್ನು ಪರಿಚಹಿಸಿರುವುದು ಹೆಮ್ಮೆ ತಂದಿದೆ.” ಎಂದು ಹೇಳಿದ್ದಾರೆ.
ಈ ಬಯೊಮೆಟ್ರಿಕ್ ಸೌಲಭ್ಯವು ಆರ್‍‌ಬಿಐನ 2 ಅಂಶದ ದೃಢೀಕರಣ ಮಾರ್ಗಸೂಚಿಗೆ ಅನುಗುಣವಾಗಿದೆ. ಜೊತೆಗೆ ಬಯೊಮಟ್ರಿಕ್‌ ವಿಫಲವಾದಲ್ಲಿ ಒಟಿಪಿ ವ್ಯವಸ್ಥೆಯನ್ನೂ ಗ್ರಾಹಕರಿಗೆ ನೀಡುತ್ತದೆ. ಒನ್‌ ಟೈಮ್‌ ಕನ್ಸೆಂಟ್‌ ಮೂಲಕ ಗ್ರಾಹಕರು ನೋಂದಾಯಿಸಿಕೊಂಡು ಈ ಸೇವೆಯನ್ನು ಪಡೆಯಬಹುದಾಗಿದೆ. ಇದು ಆಂಡ್‌ರಾಯ್ಡ್‌ ಮತ್ತು ಐಒಎಸ್‌ ಸ್ಮಾರ್ಟ್ ಫೋನ್‌ಗಳಲ್ಲಿಯೂ ಲಭ್ಯವಿದೆ.
ಏನಿದರ ಉಪಯೋಗಗಳು? 
ಒಟಿಪಿಯ ಜಂಜಾಟವಿಲ್ಲ : ಫಿಂಗರ್ ಪ್ರಿಂಟ್ ಅಥವಾ ಫೇಸ್‌ ಐಡಿ ಬಳಸಬಹುದು
3 ಸೆಕೆಂಡ್‌ನಲ್ಲಿ ವಹಿವಾಟು ಪೂರ್ಣಗೊಳಿಸಬಹುದು
ಪ್ರತಿಯೊಂದು ವಹಿವಾಟು ಕೂಡ ಪರಿಶೀಲಿಸಲಾಗುತ್ತದೆ
ಗ್ರಾಹಕರ ಕೈಯಲ್ಲಿ ಸಂಪೂರ್ಣ ನಿಯಂತ್ರಣ – ಬಯೊಮೆಟ್ರಿಕ್ ಸಮಸ್ಯೆ ಬಂದಲ್ಲಿ ಒಟಿಪಿ ಸೌಲಭ್ಯ ಕೂಡ ಲಭ್ಯ
ಈ ಸೇವೆಯು ಫೆಡರಲ್ ಬ್ಯಾಂಕ್ ನ ಡೆಬಿಟ್ ಮತ್ತು ಕ್ರೆಡಿಕ್ ಕಾರ್ಡ್ ಬಳಕೆದಾರರಿಗೆ ಲಭ್ಯವಿದ್ದು , ಹಂತಹಂತವಾಗಿ ಎಲ್ಲಾ ಮರ್ಚೆಂಟ್‌ ಪಾರ್ಟ್ನರ್‍‌ಗಳಿಗೂ ವಿಸ್ತರಿಸಲಾಗುವುದು ಎಂದು ಬ್ಯಾಂಕ್ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!