ಕಾನ್ಸ್​​ಟೇಬಲ್​ ವಿರುದ್ಧ ಅತ್ಯಾಚಾರ, ಬ್ಲ್ಯಾಕ್‌ಮೇಲ್ ಆರೋಪ ಮಾಡಿದ ಮಹಿಳಾ ಸಬ್ ಇನ್ಸ್‌ಪೆಕ್ಟರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರಾಖಂಡ ರಾಜಧಾನಿ ಡೆಹ್ರಾಡೂನ್‌ನ ಮಹಿಳಾ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಒಬ್ಬರು ತಮ್ಮದೇ ಇಲಾಖೆಯ ಕಾನ್‌ಸ್ಟೆಬಲ್ ಒಬ್ಬರು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಮತ್ತು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಸಂತ್ರಸ್ತೆ ನೀಡಿರುವ ದೂರಿನ ಮೇರೆಗೆ ಡೆಹ್ರಾಡೂನ್​ ಪಟೇಲ್​ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪೊಲೀಸ್​ ಕಾನ್ಸ್​ಟೇಬಲ್​ ​ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಶೀಘ್ರದಲ್ಲೇ ದೂರುದಾರ ಮಹಿಳಾ ಸಬ್​ ಇನ್ಸ್​​ಪೆಕ್ಟರ್​​ ಹೇಳಿಕೆಯನ್ನೂ ಮ್ಯಾಜಿಸ್ಟ್ರೇಟ್​ ಮುಂದೆ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳಾ ಸಬ್​ ಇನ್ಸ್‌ಪೆಕ್ಟರ್ ಕೆಲವು ಸಮಯದ ಹಿಂದೆ ಗುಡ್ಡಗಾಡು ಜಿಲ್ಲೆಗೆ ವರ್ಗಾಯಿಸಲಾಗಿತ್ತು. ಸ್ವಲ್ಪ ಸಮಯದವರೆಗೆ ಕೆಲಸ ಮಾಡಿದ ಮಹಿಳಾ ಇನ್ಸ್​​ಪೆಕ್ಟರ್​ ವೈಯಕ್ತಿಕ ಸಮಸ್ಯೆಗಳನ್ನು ಉಲ್ಲೇಖಿಸಿ ಬಯಲು ಜಿಲ್ಲೆಗೆ ವರ್ಗಾವಣೆ ಮಾಡಲು ವಿನಂತಿಸಿದ್ದರು. ನಂತರ ಪೊಲೀಸ್ ಇಲಾಖೆ ಅವರನ್ನು ಡೆಹ್ರಾಡೂನ್‌ನ ಒಂದು ಶಾಖೆಗೆ ವರ್ಗಾವಣೆ ಮಾಡಿತ್ತು.

ಒಂದು ದಿನ ನಾನು ಕಚೇರಿಗೆ ಬರುವುದು ತಡವಾಗಿದ್ದು, ಅಧಿಕಾರಿಗಳು ವಿವರಣೆ ಕೇಳಿದ್ದರು. ಮನೆ ಕರ್ತವ್ಯ ಸ್ಥಳದಿಂದ ಬಹಳ ದೂರದಲ್ಲಿದೆ. ಮರುದಿನ ಕಚೇರಿಗೆ ಸರಿಯಾದ ಸಮಯಕ್ಕೆ ತಲುಪಲು ಸಾಧ್ಯವಾಗುವಂತೆ ನಗರದ ಒಂದು ಹೋಟೆಲ್​ನಲ್ಲಿ ತಂಗಲು ನಿರ್ಧರಿಸಿದ್ದೆ. ಎಲ್ಲಾ ಕಚೇರಿ ಕೆಲಸಗಳನ್ನು ಆರೋಪಿ ಕಾನ್ಸ್​​​ಟೇಬಲ್​​ ಮಾಡುತ್ತಿದ್ದರು. ಹಾಗಾಗಿಯೇ ನಾನು ಕೂಡ ಆರೋಪಿ ಕಾನ್ಸ್​​ಟೇಬಲ್​​​ಗೆ ಹೋಟೆಲ್‌ನಲ್ಲಿ ನನಗಾಗಿ ಒಂದು ಕೊಠಡಿ ಕಾಯ್ದಿರಿಸುವಂತೆ ಕೇಳಿದ್ದೆ.

ಆರೋಪಿ ಕಾನ್ಸ್​ಟೇಬಲ್​ ಹೋಟೆಲ್‌ನಲ್ಲಿ ಕೊಠಡಿ ಕಾಯ್ದಿರಿಸಿದ್ದಾಗಿ ಹೇಳಿದ್ದ. ಕರ್ತವ್ಯ ಮುಗಿದ ನಂತರ, ಆರೋಪಿ ನನ್ನನ್ನು ಹೋಟೆಲ್‌ಗೆ ಕರೆದೊಯ್ದಿದ್ದು, ಕೊಠಡಿ ನೋಡುವ ನೆಪದಲ್ಲಿ ನನ್ನ ಕೋಣೆಗೆ ಬಂದಿದ್ದ. ಈ ವೇಳೆ ಆರೋಪಿ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಅತ್ಯಾಚಾರದ ಸಮಯದಲ್ಲಿ ಆರೋಪಿ ವಿಡಿಯೋ ಮಾಡಿದ್ದು, ಯಾರಿಗಾದರೂ ಏನಾದರೂ ಹೇಳಿದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಸಂತ್ರಸ್ತೆ ತಾನು ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.

ಘಟನೆಯ ನಂತರ ನಾನು ತುಂಬಾ ಭಯಭೀತಳಾಗಿದ್ದೆ. ಏಳು ದಿನಗಳ ರಜೆ ತೆಗೆದುಕೊಂಡು ಮನೆಗೆ ಹೋಗಬೇಕು ಎಂದುಕೊಂಡಿದ್ದೆ. ಆದರೆ ಭಯದಿಂದಾಗಿ ಮನೆಗೆ ಹೋಗಲು ಸಾಧ್ಯವಾಗಲಿಲ್ಲ. ಇದೀಗ ಕೊನೆಗೂ ಧೈರ್ಯ ಮಾಡಿ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಮಹಿಳಾ ಸಬ್​ ಇನ್ಸ್​ಪೆಕ್ಟರ್​ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!