ಹೊಸದಿಗಂತ ವರದಿ, ಅಂಕೋಲಾ:
ತಾಲೂಕಿನ ಶಕ್ತಿ ದೇವತೆ ಶ್ರೀಶಾಂತಾದುರ್ಗಾ ದೇವಿಯ ಬಂಡಿ ಹಬ್ಬದ ಕಳಶದ ಮೆರವಣಿಗೆ ಅಕ್ಷಯ ತದಿಗೆಯಂದು ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ಆರಂಭಗೊಂಡಿತು.
ವಾದ್ಯ ಘೋಷಗಳೊಂದಿಗೆ
ಕುಂಬಾರಕೇರಿಯ ಕಳಸ ದೇವಸ್ಥಾನದಿಂದ ಹೊರಟು ಭಕ್ತಾಧಿಗಳಿಂದ ಪೂಜೆ ಸ್ವೀಕರಿಸುತ್ತ
ಕದಂಬೇಶ್ವರ ದೇವಸ್ಥಾನ, ಬಂಡಿಕಟ್ಟೆ ಮಾರ್ಗವಾಗಿ ಶ್ರೀಶಾಂತಾದುರ್ಗಾ ದೇವಾಲಯಕ್ಕೆ ಬಂದು ದೇವಾಲಯದಲ್ಲಿ ವಿಶೇಷ ಪೂಜೆ ನಡೆಯಿತು.
ಏಪ್ರಿಲ್ 24 ರಿಂದ ಆಡುಕಟ್ಟೆಯಲ್ಲಿ ಮುಖವಾಡ ಕುಣಿತ ಮತ್ತಿತರ ಸಂಪ್ರದಾಯಗಳು ಪ್ರತಿದಿನ ನಡೆಯಲಿದ್ದು ಮೇ 1 ರಂದು ದೇವರು ಕರೆಯುವ ಕಾರ್ಯಕ್ರಮ ನಡೆಯಲಿದೆ.
ಮೇ 4 ರಂದು ಬಂಡಿಹಬ್ಬ, ಮೇ 5 ರಂದು ಹರಕೆಗಳ ಸಲ್ಲಿಕೆ ನಡೆಯಲಿದೆ.
ಗುನಗರು, ಬಿಡಗುನಗರು, ಅರ್ಚಕರು ದೇವಾಲಯದ ಹಕ್ಕುದಾರರು, ಕಟಗಿದಾರರು, ಆಡಳಿತ ಮಂಡಳಿ ಪ್ರಮುಖರು ಪಾಲ್ಗೊಂಡಿದ್ದರು.