ಬೇಕಾಗುವ ಸಾಮಗ್ರಿಗಳು:
* ಬಿಳಿ ಎಳ್ಳು – 1 ಕಪ್
* ಬೆಲ್ಲ – 3/4 ಕಪ್ (ತುರಿದುಕೊಳ್ಳಿ)
* ನೀರು – 2 ಟೇಬಲ್ ಸ್ಪೂನ್
* ಏಲಕ್ಕಿ ಪುಡಿ – 1/2 ಟೀ ಸ್ಪೂನ್
* ತುಪ್ಪ – 1/2 ಟೀ ಸ್ಪೂನ್
ಮಾಡುವ ವಿಧಾನ:
ಮೊದಲಿಗೆ, ಬಾಣಲೆಯನ್ನು ಬಿಸಿ ಮಾಡಿ ಎಳ್ಳನ್ನು ಹಾಕಿ. ಮಧ್ಯಮ ಉರಿಯಲ್ಲಿ ಚಿನ್ನದ ಬಣ್ಣ ಬರುವವರೆಗೂ ಅಥವಾ ಸಿಡಿಯುವ ಶಬ್ದ ಬರುವವರೆಗೂ ಹುರಿಯಿರಿ. ಎಳ್ಳು ಕಪ್ಪಾಗದಂತೆ ನೋಡಿಕೊಳ್ಳಿ. ಹುರಿದ ಎಳ್ಳನ್ನು ಒಂದು ತಟ್ಟೆಗೆ ಹಾಕಿ ತಣ್ಣಗಾಗಲು ಬಿಡಿ.
ಬಳಿಕ ಅದೇ ಬಾಣಲೆಗೆ ತುರಿದ ಬೆಲ್ಲ ಮತ್ತು ನೀರು ಹಾಕಿ. ಬೆಲ್ಲ ಸಂಪೂರ್ಣವಾಗಿ ಕರಗುವವರೆಗೆ ಮತ್ತು ನೊರೆ ಬಂದ ಮೇಲೆ, ಒಂದು ಪಾತ್ರೆಯಲ್ಲಿ ನೀರು ಹಾಕಿ ಬೆಲ್ಲದ ಪಾಕದ ಹನಿ ಹಾಕಿ. ಪಾಕ ಗಟ್ಟಿಯಾಗಿ ಬಂದರೆ ಪಾಕ ಸಿದ್ಧವಾಗಿದೆ ಎಂದರ್ಥ.
ಈಗ ಹುರಿದಿಟ್ಟ ಎಳ್ಳು ಮತ್ತು ಏಲಕ್ಕಿ ಪುಡಿಯನ್ನು ಬೆಲ್ಲದ ಪಾಕಕ್ಕೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣ ಗಟ್ಟಿಯಾಗುವ ಮೊದಲು ಒಲೆಯ ಮೇಲಿಂದ ಇಳಿಸಿ. ಕೈಗೆ ಸ್ವಲ್ಪ ತುಪ್ಪ ಸವರಿಕೊಂಡು ಬಿಸಿ ಇರುವಾಗಲೇ ಸಣ್ಣ ಸಣ್ಣ ಉಂಡೆಗಳನ್ನು ಮಾಡಿ. ಉಂಡೆಗಳು ತಣ್ಣಗಾದ ನಂತರ, ಗಾಳಿಯಾಡದ ಡಬ್ಬದಲ್ಲಿ ಹಾಕಿ ಇಡಿ.
ಈ ಸಿಹಿ ಎಳ್ಳುಂಡೆಗಳು ಶ್ರೀಕೃಷ್ಣ ಜನ್ಮಾಷ್ಟಮಿಗೆ ನಿಮ್ಮ ಮನೆಯಲ್ಲಿ ಸಂತೋಷವನ್ನು ಮತ್ತಷ್ಟು ಹೆಚ್ಚಿಸಲಿ!