ಹೊಸದಿಗಂತ ಡಿಜಿಟಲ್ ಡೆಸ್ಕ್:
ಭ್ರೂಂಹತ್ಯೆಗಾಗಿ ಬಳಸುವ ವೈದ್ಯಕೀಯ ಕಿಟ್‌ಗಳ ಬೆಲೆ 440 ರೂಪಾಯಿ ಆಗಿದೆ, ಈ ಕಿಟ್‌ಗಳನ್ನು ಮಂಡ್ಯ ಜಿಲ್ಲೆಯಲ್ಲಿ ಅಕ್ರಮವಾಗಿ 10 ಪಟ್ಟು ಹೆಚ್ಚು ಬೆಲೆಗೆ ಮಾರಾಟ ಮಾಡಲಾಗಿದೆ ಎನ್ನುವ ಆರೋಪ ಎದುರಾಗಿದೆ.
440 ರೂಪಾಯಿ ಬೆಲೆ ಪ್ರಿಂಟ್ ಆಗಿದ್ದರೂ ಅದನ್ನು ನಾಲ್ಕು ಸಾವಿರ ರೂಪಾಯಿಗೆ ಮಾತಾಟ ಮಾಡಲಾಗಿದೆ. ಅವ್ಯಾಹತವಾಗಿ ಹೆಣ್ಣುಭ್ರೂಣ ಹತ್ಯೆ ನಡೆದಿರಬಹುದು ಎನ್ನುವ ಅನುಮಾನ ಎದುರಾಗಿದ್ದು, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ. ಮೋಹನ್ ಹೆಣ್ಣುಭ್ರೂಣ ಹತ್ಯೆ ಆರೋಪದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಸಗಟು ಔಷಧಿ ಮಾರಾಟಗಾರರು, ಚಿಲ್ಲರೆ ಮಾರಾಟಗಾರರ ಚಟುವಟಿಕೆಗಳ ಮೇಲೆ ನಿಗಾ ಇರಿಸಿದ್ದೇವೆ ಎಂದಿದ್ದಾರೆ.
ಕಳೆದ ವರ್ಷ ಜನವರಿ 1 ರಿಂದ ಡಿಸೆಂಬರ್ 12 ರವರೆಗೆ ಸುಮಾರು 14 ಸಗಟು ಔಷಧ ಮಾರಾಟ ಮಳಿಗೆಯಲ್ಲಿ ಆರು ಸಾವಿರಕ್ಕೂ ಹೆಚ್ಚು ಕಿಟ್‌ಗಳು ಮಾರಾಟವಾಗಿವೆ ಎನ್ನಲಾಗಿದೆ.