ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಂತಿಮ ಹಾಗೂ 5ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ತಮಿಳುನಾಡಿನ ಚಂಡಮಾರುತದಿಂದ ಬೆಂಗಳೂರಿನಲ್ಲಿ ತುಂತುರ ಮಳೆ ಸುರಿಯುತ್ತಿದೆ. ಟಾಸ್ಗೂ ಮೊದಲು ಮಳೆ ಅಡ್ಡಿಯಾದ ಕಾರಣ ಪಿಚ್ ಕವರ್ ಮಾಡಲಾಗಿತ್ತು. ಇದೀಗ ಮಳೆ ಟಾಸ್ ಪ್ರಕ್ರಿಯೆ ಕೂಡ ಮುಗಿದಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ತಂಡದಲ್ಲಿ ಒಂದೊಂದು ಬದಲಾವಣೆ ಮಾಡಲಾಗಿದೆ. ದೀಪಕ್ ಚಹಾರ್ ಬದಲು ಅರ್ಶದೀಪ್ ತಂಡ ಸೇರಿಕೊಂಡಿದ್ದಾರೆ. ಇತ್ತ ಗ್ರೀನ್ ಬದಲು ನಥನ್ ಎಲ್ಲಿಸ್ ಆಸ್ಟ್ರೇಲಿಯಾ ತಂಡ ಸೇರಿಕೊಂಡಿದ್ದಾರೆ.
ಭಾರತ ಹಾಗೂ ಆಸ್ಟ್ರೇಲಿಯಾ 5 ಪಂದ್ಯಗಳ ಸರಣಿಯಲ್ಲಿ 3-1 ಗೆಲುವಿನ ಮೂಲಕ ಈಗಾಗಲೇ ಸರಣಿ ಭಾರತದ ಕೈವಶವಾಗಿದೆ. ಆರಂಭಿಕ 2 ಪಂದ್ಯ ಗೆದ್ದ ಭಾರತ 3ನೇ ಪಂದ್ಯ ಕೈಚೆಲ್ಲಿತ್ತು. ಆದರೆ 4ನೇ ಪಂದ್ಯದಲ್ಲಿ ಮತ್ತೆ ಅಬ್ಬರಿಸಿ ಗೆಲುವು ದಾಖಲಿಸಿತ್ತು. ಶಿಸ್ತುಬದ್ಧ ಬ್ಯಾಟಿಂಗ್ ಹಾಗೂ ಬೌಲರ್ಗಳ ಮೊನಚು ದಾಳಿಯ ನೆರವಿನಿಂದ 4ನೇ ಟಿ20 ಪಂದ್ಯದಲ್ಲಿ ಭಾರತ 20 ರನ್ ಜಯಭೇರಿ ಬಾರಿಸಿತ್ತು.. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಭಾರತ 3-1ರಿಂದ ಗೆಲುವು ತನ್ನದಾಗಿಸಿಕೊಂಡಿತು.
ಟೀಂ ಇಂಡಿಯಾ
ಯಶಸ್ವಿ ಜಸ್ವಾಲ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್(ನಾಯಕ), ರಿಂಕು ಸಿಂಗ್, ಜಿತೇಶ್ ಶರ್ಮಾ, ಅಕ್ಸರ್ ಪಟೇಲ್, ರವಿ ಬಿಶ್ನೋಯ್, ಅವೇಶ್ ಖಾನ್, ಮುಕೇಶ್ ಕುಮಾರ್, ಅರ್ಶದೀಪ್ ಸಿಂಗ್
ಆಸ್ಟ್ರೇಲಿಯಾ
ಟ್ರಾವಿಸ್ ಹೆಡ್, ಜೋಶ್ ಫಿಲಿಪ್, ಬೆನ್ ಮೆಕ್ಡರ್ಮಾಟ್, ಆ್ಯರೋನ್ ಹಾರ್ಡಿ, ಟಿಮ್ ಡೇವಿಡ್, ಮ್ಯಾಥ್ಯೂ ಶಾರ್ಟ್, ಮಾಥ್ಯೂ ವೇಡ್(ನಾಯಕ), ಬೆನ್ ಡ್ವಾರ್ಶೂಯಿಸ್, ನತನ್ ಎಲ್ಲಿಸ್, ಜೇಸನ್ ಬೆಹೆನ್ಡ್ರಾಫ್, ಟನ್ವೀರ್ ಸಾಂಘ