SHOCKING VIDEO| ಇದೆಂಥಾ ಭಯಂಕರ ಗಾಳಿ ಶಿವನೇ..ಎದೆ ನಡುಗಿಸುವ ದೃಶ್ಯ ವೈರಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಕ್ಕಸ ಗಾಳಿ, ಕರ್ಕಶ ಶಬ್ದ, ಗುಡುಗು ಸಿಡಿಲಿನ ಆರ್ಭಟ..ಸೌದಿ ಅರೇಬಿಯಾದಲ್ಲಿ ಭಯಂಕರ ವಾತಾವರಣ ತಲ್ಲಣ ಮೂಡಿಸಿದೆ. ಭಾರೀ ಗಾಳಿ, ಮಳೆಯಿಂದ ಪ್ರಮುಖ ನಗರಗಳು ತತ್ತರಿಸಿವೆ.

ಬಿರುಗಾಳಿಗೆ ರಸ್ತೆಯಲ್ಲಿದ್ದ ಭಾರಿ ಹೋರ್ಡಿಂಗ್‌ಗಳು, ಟವರ್‌ಗಳು ಹಾರಿಹೋಗಿದ್ದು, ಆಸ್ತಿಪಾಸ್ತಿಗೆ ಗಂಭೀರ ಹಾನಿಯಾಗಿದೆ. ಪ್ರಖ್ಯಾತ ನಗರಗಳಾದ ಜೆಡ್ಡಾ ಮತ್ತು ಮಕ್ಕಾದಲ್ಲಿ ಭೀಕರ ಗಾಳಿ ಬೀಸಿತು. ಈ ಗಾಳಿಗೆ ಸೋಫಾ, ಕುರ್ಚಿ ಮತ್ತಿತರ ವಸ್ತುಗಳು ದಿಕ್ಕಾಪಾಲಾಗಿವೆ.

ಭೀಕರ ಗಾಳಿಯಿಂದ ಉಂಟಾದ ವಿನಾಶದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ವೀಡಿಯೋಗಳನ್ನು ನೋಡಿದ ನೆಟ್ಟುಗರು ಭಯಭೀತರಾದರು. ವೀಡಿಯೋ ನೋಡಿದವರಿಗೆ ಇಷ್ಟು ಗಾಬರಿ ಆಗಿದ್ದರೆ ಪ್ರತ್ಯಕ್ಷವಾಗಿ ಎದುರಿಸಿದವರ ಪರಿಸ್ಥಿತಿ ಹೇಗಿದೆ ಎಂಬುದನ್ನು ಊಹಿಸಲೂ ಅಸಾಧ್ಯ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!