ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆಂಡತಿಗೆ ಪ್ರೀತಿಯ ಗಂಡನಿದ್ದರೆ ಆ ಜೀವ ಸಂತೋಷದಿಂದ ಇರುತ್ತದೆ. ಅದೇ ರೀತಿ ಪತ್ನಿ ಕೂಡ ಪತಿಯೊಂದಿಗೆ ಅನ್ಯೋನ್ಯವಾಗಿದ್ದರೆ, ಯಾವುದೇ ಸವಾಲುಗಳಾದರೂ ಸರಿಯೇ ಮೆಟ್ಟಿ ನಲ್ಲಿಬಹುದು. ಇಂತಹದ್ದೇ ಅನ್ಯೋನ್ಯ ಜೋಡಿಯೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಲ್ಲಿದೆ. 16 ನೇ ವಯಸ್ಸಿನಲ್ಲಿ ಅರಳಿದ ಅವರ ಪ್ರೀತಿ ಮದುವೆಯಾಗಿ 50 ವರ್ಷಗಳ ನಂತರವೂ ಹಾಗೆಯೇ ಇದೆ. ಅದಕ್ಕಾಗಿಯೇ ತಮ್ಮ 50 ನೇ ವಿವಾಹ ವಾರ್ಷಿಕೋತ್ಸಕ್ಕೆ ಪತ್ನಿಗೆ ಇಷ್ಟವಾದ ಸೂರ್ಯಕಾಂತಿ ಹೂವನ್ನು ಗಿಫ್ಟ್ ಕೊಟ್ಟು ಆನಂದಪಡಿಸಿದ್ದಾರೆ.
ಲೀ ವಿಲ್ಸನ್ ಎಂಬ ಒಬ್ಬ ರೈತ ಕೃಷಿಯನ್ನೇ ಜೀವನಾಧಾರವಾಗಿ ಮಾಡಿಕೊಂಡು ಬದುಕುತಿದ್ದಾರೆ. ಕೃಷಿ ಜೊತೆಗೆ ಹೆಂಡತಿಯೆಂದರೆ ಇನ್ನೂ ಪ್ರೀತಿ. ಆತನ ಪತ್ನಿ ರೆನೀಗೆ ಸೂರ್ಯಕಾಂತಿ ಹೂ ಅಂದರೆ ಎಲ್ಲಿಲ್ಲದ ಪ್ರೀತಿ ಅದಕ್ಕಾಗಿಯೇ ತಮ್ಮ ಮದುವೆ ವಾರ್ಷಿಕೋತ್ಸವಕ್ಕೆ 80 ಎಕರೆಯಲ್ಲಿ 12 ಲಕ್ಷಕ್ಕೂ ಹೆಚ್ಚು ಸೂರ್ಯಕಾಂತಿ ಬೆಳೆ ಬೆಳೆದು ಉಡುಗೊರೆಯಾಗಿ ನೀಡಿರು.
ಆಕೆಯನ್ನು ಆ ತೋಟದಲ್ಲಿ ನಿಲ್ಲಿಸಿ, ಇದು ನನ್ನ ಉಡುಗೊರೆ ಎಂದನು. ಗಂಡನ ಕಣ್ಣಲ್ಲಿ ಕಂಡ ವಾತ್ಸಲ್ಯಕ್ಕೆ ಮನಸೋತು, ಪತಿಯನ್ನು ವಾತ್ಸಲ್ಯ-ಸ್ನೇಹದಿಂದ ತಬ್ಬಿ ಸ್ವಲ್ಪ ಕೃತಜ್ಞತೆ ತಿಳಿಸಿದಳು.
ಅಮೆರಿಕದಂತಹ ಪಾಶ್ಚಿಮಾತ್ಯ ದೇಶಗಳಲ್ಲಿ ಇಷ್ಟು ದಿನ ದಾಂಪತ್ಯ ಜೀವನ ನಡೆಸುವುದು ಅಪರೂಪ. ಸಣ್ಣಪುಟ್ಟ ಕಾರಣಗಳಿಗೆ ವಿಚ್ಛೇದನ ಪಡೆಯುವ ದೇಶದಲ್ಲಿಯೂ ರೆನೀ ಮತ್ತು ಲೀ ವಿಲ್ಸನ್ 50 ವರ್ಷಗಳ ದಾಂಪತ್ಯ ಎಲ್ಲರಿಗೂ ಮಾದರಿ.