ಉಗ್ರರ ವಿರುದ್ದದ ಹೋರಾಟ ಅಂತಾರಾಷ್ಟ್ರೀಯ ಮಟ್ಟಕ್ಕೆ ತಿಳಿಯುವುದು ಬೇಡ: ಖರ್ಗೆ

ಹೊಸದಿಗಂತ ವರದಿ, ಹುಬ್ಬಳ್ಳಿ:

ಭಯೋತ್ಪಾದಕರ ವಿರೋಧ ಹೋರಾಟ ಅಂತಾರಾಷ್ಟ್ರೀಯ ಮಟ್ಟಕ್ಕೆ ತಿಳಿಯುವುದು ಬೇಡ. ನಮಗೆ ದೇಶದ ಹಾಗೂ ದೇಶ ಜನರ ರಕ್ಷಣೆ ಮಾತ್ರ ಮಾಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಗುರುವಾರ ಇಲ್ಲಿನ ಕಾರವಾರ ರಸ್ತೆಯ ಗಿರಣಿಚಾಳ ಮೈದಾನದಲ್ಲಿ ಕಾಂಗ್ರೆಸ್ ವತಿಯಿಂದ ಸಂವಿಧಾನ ಬಚಾವೋ ಅಭಿಯಾನ’ದ ಹೆಸರಿನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

ಪಹಗ್ಲಾಮ್ ಭಯೋತ್ಪಾದಕ ದಾಳಿ ಕೇಂದ್ರ ಸರ್ಕಾರ ಭದ್ರತಾ ವೈಪ್ಯಲ್ಯವಾಗಿದ್ದು, ಈಗ ಬಗ್ಗೆ ಮೋದಿ ಅವರು ಸರ್ವಪಕ್ಷ ಸಭೆ ಕರೆದು ಸ್ಪಷ್ಟೀಕರಣ ನೀಡಬೇಕು ಎಂಬುವುದು ನಮ್ಮ ಆಗ್ರಹವಾಗಿದೆ. ಪ್ರಧಾನಿ ಮೋದಿ ಅವರು ಸಭೆ ಬಿಟ್ಟು ಬಿಹಾರಕ್ಕೆ ಹೋಗಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಗೊತ್ತಾಗಲಿ ಎಂದು ಇಂಗ್ಲಿಷ್‌ನಲ್ಲಿ ಭಾಷಣ ಮಾಡಿದರು. ಭಯೋತ್ಪಾದಕ ಮಟ್ಟ ಹಾಕುವ ವಿಚಾರ ಅಂತಾರಾಷ್ಟ್ರೀಯ ಮಟ್ಟಕ್ಕೆ ತಿಳಿಯುವುದು ನಮಗೆ ಬೇಡ. ನಮಗೆ ದೇಶ ಹಾಗೂ ಜನರ ರಕ್ಷಣೆ ಮಾತ್ರ ಬೇಕಿದೆ. ದೇಶ ರಕ್ಷಣೆ ಬಂದಾಗ ಎಲ್ಲರೂ ಒಗ್ಗಟ್ಟಾಗ ಬೇಕಿದೆ ಎಂದು ಹೇಳಿದರು.

ಕೇಂದ್ರ ಸಚಿವರೊಬ್ಬರು ೧೪೦ ಕೋಟಿ ಜನರಲ್ಲಿ ದೇಶ ಭಕ್ತಿ ಇದ್ದರೆ ಭಯೋತ್ಪಾದಕರ ದಾಳಿ ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ. ದೇಶ ಭಕ್ತಿ ಬಗ್ಗೆ ಬ್ರಿಟಿಷರ್ ಹತ್ತಿರ ನೌಕರಿ ಮಾಡಿದವರು ಹೇಳು ಅವಶ್ಯಕತೆ ಇಲ್ಲ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟವರು ಮಹಾತ್ಮ ಗಾಂಽ ಅವರು. ದೇಶದ ಸ್ವಾಭಿಮಾನ ವಿಷಯ ಬಂದಾಗ ಎದೆತಟ್ಟಿದವರು ಕಾಂಗ್ರೆಸ್‌ನವರು. ಸ್ವಾತಂತ್ರ್ಯಕ್ಕಾಗಿ ಬಿಜೆಪಿ ಅವರು ಯಾರು ಪ್ರಾಣ ಬಿಟ್ಟಿದ್ದಾರೆ ಎಂದು ಪ್ರಶ್ನಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!