ಹೊಸದಿಗಂತ ಡಿಜಿಟಲ್ ಡೆಸ್ಕ್:
ಧಾರವಾಡ ಜಿಲ್ಲೆಯಲ್ಲಿ ಕಬ್ಬು ಕಟಾವು ವಿಚಾರಕ್ಕಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿಯಾಗಿದ್ದು, ಜಗಳ ಬಿಡಿಸಲು ಹೋದಂತ ಓರ್ವ ಮಹಿಳೆಯನ್ನೇ ಕೊಲೆ ಮಾಡಲಾಗಿದೆ.
ಧಾರವಾಡದ ಕಲಘಟಗಿ ತಾಲ್ಲೂಕಿನ ಕರುವಿನಕೊಪ್ಪದಲ್ಲಿ ಕಬ್ಬು ಕಟಾವು ವಿಚಾರಕ್ಕೆ ಎರುಡ ಗುಂಪುಗಳ ನಡುವೆ ಮಾರಾಮಾರಿಯಾಗಿದೆ. ಈ ಸಂದರ್ಭದಲ್ಲಿ ಅಲ್ಲೇ ಇದ್ದಂತ ಅನುಸೂಯ(40) ಎಂಬ ಮಹಿಳೆ ಜಗಳ ಬಿಡಿಸೋದಕ್ಕೆ ತೆರಳಿದ್ದಾರೆ. ಆದರೇ ಆಕೆಯನ್ನು ಕೊಲೆ ಮಾಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ.
ಇದಲ್ಲದೇ ಸಚಿನ್ ಪಾಟೀಲ್, ಬಸವರಾಜ, ಮೈಲಾರಪ್ಪ ಎಂಬುವರು ಈ ಮಾರಾಮಾರಿಯಲ್ಲಿ ಗಾಯಗೊಂಡಿದ್ದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.