ಹೊಸದಿಗಂತ ವರದಿ ವಿಜಯಪುರ:
ಮನೆಯ ಎದುರು ನಿಲ್ಲಿಸಿದ ಬೈಕ್ ತೆಗೆಯುವ ವಿಚಾರಕ್ಕಾಗಿ ಮಾರಕಾಸ್ತ್ರ, ಬಡಗೆಯಿಂದ ಹೊಡದಾಟ ಆಗಿರುವ ಘಟನೆ ನಗರದ ಟಕ್ಕೆಯಲ್ಲಿ ನಡೆದಿದೆ.
ಇಲ್ಲಿನ ನಿವಾಸಿಗಳಾದ ಕಿರಣ ಗಜಕೋಶ ಹಾಗೂ ಬಸಯ್ಯ ಹಿರೇಮಠ ಎಂಬವರ ಮಧ್ಯೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಮಾರಕಾಸ್ತ್ರ ಮತ್ತು ಬಡಗೆಯಿಂದ ಹೊಡೆದಾಡಿಕೊಂಡಿದ್ದು, ಕಲ್ಲು ತೂರಾಟವು ಕೂಡ ನಡೆದಿದೆ.
ಬಳಿಕ ಬಡಾವಣೆಯ ನಿವಾಸಿಗಳು ಆಗಮಿಸಿ, ಕಿರಣ ಹಾಗೂ ಬಸಯ್ಯ ಇಬ್ಬರನ್ನು ಬೇರ್ಪಡಿಸಿ ಜಗಳವನ್ನು ತಡೆದಿದ್ದಾರೆ.
ಈ ಘಟನೆಯಲ್ಲಿ ಕಿರಣ ಗಜಕೋಶ ಅವರು ಹಲ್ಲೆಗೊಳಗಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಲ್ಲೆಗೊಳಗಾದ ಕಿರಣ ಗಜಕೋಶನಿಗೆ ಬಸಯ್ಯ ಹಿರೇಮಠ, ಗೌರಮ್ಮ ಹಿರೇಮಠ, ಸಿದ್ದರಾಮಯ್ಯ ಹಿರೇಮಠ ಸೇರಿಕೊಂಡು ಹಲ್ಲೆ ನಡೆಸಿದ್ದಾರೆ ಎಂದು ಕಿರಣ ಪತ್ನಿ ಆರೋಪಿಸಿದ್ದಾರೆ.
ಈ ಹಲ್ಲೆ ನಡೆದ ಘಟನೆಯ ವಿಡಿಯೋ ಪಕ್ಕದ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.