ರಂಭಾಪುರಿ ಜಗದ್ಗುರುಗಳ ಕಾರಿಗೆ ಚಪ್ಪಲಿ ಎಸೆದ 59 ಜನರ ವಿರುದ್ಧ ದೂರು ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಂಭಾಪುರಿ ಜಗದ್ಗುರುಗಳ ಕಾರಿಗೆ ಚಪ್ಪಲಿ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ 59 ಜನರ ವಿರುದ್ಧ ದೂರು ದಾಖಲಿಸಲಾಗಿದೆ.

ಕಲಾದಗಿ ಗ್ರಾಮದಲ್ಲಿ ಅಹಿತಕರ ಘಟನೆ ನಡೆದಿದೆ. ಸಾಯಿ ಗುರುಲಿಂಗೇಶ್ವರ ಮಠದ ಉತ್ತರಾಧಿಕಾರಿ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಾದಗಿ ಗ್ರಾಮದ 59 ಜನರ ಮೇಲೆ ದೂರು ದಾಖಲಾಗಿದೆ.

ನಿನ್ನೆ ರಂಭಾಪುರಿ ಜಗದ್ಗುರುಗಳು ಕಲಾದಗಿ ಮಾರ್ಗವಾಗಿ ಉದಗಟ್ಟಿಗೆ ತೆರಳುವ ವೇಳೆ ಜನರು ಕಾರ್‌ಗೆ ಮುತ್ತಿಗೆ ಹಾಕಿ ಚಪ್ಪಲಿ ಎಸೆದಿದ್ದಾರೆ.

2015 ರಲ್ಲಿ ಕಲಾದಗಿಯಲ್ಲಿ ಶ್ರೀ ಗುರುಲಿಂಗೇಶ್ವರ ಮಠದ ಅಂದಿನ ಪೀಠಾಧಿಪತಿ ಶ್ರೀ ಚಂದ್ರಶೇಖರ ಸ್ವಾಮೀಜಿಗಳು ಲಿಂಗೈಕ್ಯರಾದ ನಂತರ ನೂತನ ಪೀಠಾಧಿಪತಿ ಯಾರು ಎನ್ನುವ ಪ್ರಶ್ನೆ ಎದ್ದಿತ್ತು. ಗ್ರಾಮಸ್ಥರು ವಿದ್ವತ್ ಇರುವ ಸ್ವಾಮೀಜಿಗಳನ್ನು ಪೀಠಾಧಿಪತಿಗಳನ್ನಾಗಿ ಮಾಡುವಂತೆ ಪಟ್ಟು ಹಿಡಿದಿರುತ್ತಾರೆ. ಆದರೆ ರಂಭಾಪುರಿ ಜಗದ್ಗುರುಗಳು ಲಿಂಗೈಕ್ಯರಾಗಿದ್ದ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರ ಸಂಬಂಧಿ ಕೆ.ಎಂ. ಗಂಗಾಧರ ಅವರನ್ನು ಪೀಠಾಧಿಪತಿಯನ್ನಾಗಿ ನೇಮಿಸಿದ್ದಾರೆ. ಇದರಿಂದ ವಾದ ವಿವಾದ, ಗಲಾಟೆಗಳು ನಡೆಯುತ್ತಲೇ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!