ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣಾ ಕಣ ರಂಗೇರುತ್ತಿದ್ದು, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್, ಸಮಾಜವಾದಿ ಪಕ್ಷ ಮೈತ್ರಿ ಮಾಡಿಕೊಂಡಿದ್ದು, ಸೀಟು ಹಂಚಿಕೆ ಫೈನಲ್ ಆಗಿದೆ.
ಯುಪಿಯಲ್ಲಿ ಕಾಂಗ್ರೆಸ್ 17, ಅಖಿಲೇಶ್ ಯಾದವ್ ಅವರ ಎಸ್‌ಪಿ, ಇತರರು 63 ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದಾರೆ.
ಈ ಕುರಿತು ಅಖಿಲೇಶ್ ಯಾದವ್ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ನಡುವಿನ ಮಾತುಕತೆ ಯಶಸ್ವಿಯಾಗಿದೆ. ಕ್ಷೇತ್ರಗಳ ಹಂಚಿಕೆ ಫೈನಲ್ ಮಾಡಲಾಗಿದೆ.
ಕಾಂಗ್ರೆಸ್ 17ರಲ್ಲಿ ಕಣಕ್ಕೆ ಇಳಿಯಲಿದ್ದು, ಉಳಿದ 63 ಸ್ಥಾನಗಳಲ್ಲಿ ಸಮಾಜವಾದಿ ಪಕ್ಷ ಮತ್ತು ಇತರ I.N.D.I.A ಪಾಲುದಾರರು ಸ್ಪರ್ಧಿಸಲಿದ್ದಾರೆ.