ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನಪ್ರಿಯ ಟಿವಿ ಶೋ ‘ಫ್ರೆಂಡ್ಸ್’ ಖ್ಯಾತಿಯ ನಟ ಮ್ಯಾಥ್ಯೂ ಪೆರ್ರಿ ಸಾವಿನ ಹಿಂದಿನ ರಹಸ್ಯ ಕೊನೆಗೂ ಬಯಲಾಗಿದೆ.
ಪೆರ್ರಿ ಅವರ ಸಾವಿಗೆ ಕೆಟಮೈನ್ ಅಂಶ ಕಾರಣವೆಂದು ಮರಣೋತ್ತರ ಪರೀಕ್ಷೆಯ ವರದಿ ಸ್ಪಷ್ಟಪಡಿಸಿದೆ.
ಮ್ಯಾಥ್ಯೂ ಪೆರ್ರಿ ಅವರು ಅತಿಯಾಗಿ ನೋವು ನಿವಾರಕ ಮಾತ್ರೆಗಳನ್ನು ಸೇವಿಸುತ್ತಿದ್ದರು. ಮದ್ಯಪಾನದಿಂದಾಗಿ ಅವರ ಆರೋಗ್ಯದಲ್ಲಿ ಸಾಕಷ್ಟು ತೊಂದರೆ ಕಾಣಿಸಿಕೊಂಡಿತ್ತು. ಜೊತೆಗೆ ಮ್ಯಾಥ್ಯೂ, ಖಿನ್ನತೆಗೆ ಒಳಗಾಗಿದ್ದರಿಂದ ಕೆಟಮೈನ್‌ನ ತೆಗೆದುಕೊಳ್ಳುವ ಥೆರಪಿಗೆ ಒಳಗಾಗಿದ್ದರು. ಮ್ಯಾಥ್ಯೂ ದೇಹದಲ್ಲಿ ಕೆಟಮೈನ್ ಪ್ರಮಾಣ ಅಧಿಕವಾಗಿತ್ತು. ಹೀಗಾಗಿ ಅವರು ನೀರಿನಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡಿದ್ದರಿಂದ ಮೇಲೆದ್ದು ಬರಲು ಅವರ ಬಳಿ ಸಾಧ್ಯವಾಗದೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಅಕ್ಟೋಬರ್ ೨೮ರಂದು ಮ್ಯಾಥ್ಯೂ ಪೆರ್ರಿ ಬಾತ್‌ಟಬ್‌ನಲ್ಲಿ ಮುಳುಗಿ ಮೃತಪಟ್ಟಿದ್ದರು. ಇವರ ಸಾವಿನ ಬಗ್ಗೆ ಅನೇಕ ಅನುಮಾನಗಳು ವ್ಯಕ್ತವಾಗಿದ್ದವು. ಇದೀಗ ಅವೆಲ್ಲವುಗಳಿಗೆ ತೆರೆ ಬಿದ್ದಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ