ಕೊನೆಗೂ ಪೊಲೀಸರ ಬಲೆಗೆ ಬಿದ್ದ ಡಬಲ್ ಮರ್ಡರ್ ಮಾಡಿ ಎಣ್ಣೆ ಪಾರ್ಟ್ ಮಾಡುತ್ತಿದ್ದ ಕಿರಾತಕರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಂಗಳವಾರ ಹಾಡಹಗಲೇ ಖಾಸಗಿ ಕಂಪನಿಯ ಸಿಇಒ ಹಾಗೂ ಎಂಡಿಯನ್ನು ಹತ್ಯೆಗೈದ ಮೂವರು ಕಿರಾತಕರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಡಬಲ್ ಮರ್ಡರ್ (Double Murder) ಬಳಿಕ ಆರೋಪಿಗಳು ಎಣ್ಣೆ ಪಾರ್ಟ್ ಮಾಡುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ.

ಬೆಂಗಳೂರಿನ (ಭೆನಗಾಲುರು) ಅಮೃತಹಳ್ಳಿ (Amruthahalli) ಠಾಣಾ ವ್ಯಾಪ್ತಿಯಲ್ಲಿ ಭೀಕರ ಡಬಲ್ ಮರ್ಡರ್ ನಡೆದಿತ್ತು. ಆರೋಪಿ ಜೋಕರ್ ಫೆಲಿಕ್ಸ್ (Joker Felix) ತನ್ನಿಬ್ಬರು ಸಹಚರರೊಂದಿಗೆ ಸೇರಿ ಏರೋನಾಟಿಕಲ್ಸ್ ಮೀಡಿಯಾ ಪ್ರೈವೆಟ್ ಲಿಮಿಟೆಡ್ ಕಂಪನಿಯ ಎಂಡಿ ಫಣೀಂದ್ರ ಸುಬ್ರಹ್ಮಣ್ಯ ಹಾಗೂ ಸಿಇಒ ವಿನುಕುಮಾರ್‌ನ ಹತ್ಯೆ ನಡೆಸಿದ್ದರು.

ಬಳಿಕ ತಪ್ಪಿಸಿಕೊಂಡು ಹೋದ ಹಂತಕರು ಕುಣಿಗಲ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ. ಫೆಲಿಕ್ಸ್, ವಿನಯ್ ರೆಡ್ಡಿ ಹಾಗೂ ಶಿವು ಬಂಧಿತ ಆರೋಪಿಗಳಾಗಿದ್ದಾರೆ.

ಆರೋಪಿಗಳು ಸ್ಥಳದಿಂದ ಕ್ಯಾಬ್‌ನಲ್ಲಿ ಎಸ್ಕೇಪ್ ಆದ ಬಳಿಕ ಮೆಜೆಸ್ಟಿಕ್ ತೆರಳಿ ಅಲ್ಲಿ ರೈಲು ಹತ್ತಿದ್ದರು. ಅಲ್ಲಿಂದ ಕುಣಿಗಲ್ ಹೋಗಿ ಲಾಡ್ಜ್ ಒಂದರಲ್ಲಿ ರೂಂ ಮಾಡಿದ್ದರು. ಬೆಳಗ್ಗೆ ಎದ್ದು ವಕೀಲರ ಮೂಲಕ ಕೋರ್ಟ್‌ಗೆ ಶರಣಾಗುವ ಪ್ಲಾನ್ ಅನ್ನು ಆರೋಪಿಗಳು ಮಾಡಿದ್ದರು. ಅಷ್ಟರಲ್ಲಾಗಲೇ ಪೊಲೀಸರು ಬಂದು ಆರೋಪಿಗಳನ್ನು ಬಂಧಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!