ಬಜೆಟ್ ಮಂಡಿಸುವಾಗ ಚೆಸ್ ಗ್ರ್ಯಾನ್‌ಮಾಸ್ಟರ್ ಆರ್ ಪ್ರಜ್ಞಾನಂದನನ್ನು ನೆನಪಿಸಿಕೊಂಡ ವಿತ್ತ ಸಚಿವೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆಯ ಬಜೆಟ್ ಅನ್ನು ಇಂದು ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಈ ಬಜೆಟ್ ಮಂಡನೆ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಇಡೀ ದೇಶದ ಗೌರವವನ್ನು ಹೆಚ್ಚಿಸಿದ ಚೆಸ್ ಗ್ರ್ಯಾನ್‌ಮಾಸ್ಟರ್ ಆರ್ ಪ್ರಜ್ಞಾನಂದ ಅವರನ್ನು ಸ್ಮರಿಸಿದ್ದಾರೆ.

ಭಾರತದ ನಂ.1 ಚೆಸ್ ಪಟು ಎನಿಸಿಕೊಂಡಿರುವ ಆರ್ ಪ್ರಜ್ಞಾನಂದ ಕಳೆದ ವರ್ಷ ವಿಶ್ವ ಚಾಂಪಿಯನ್ ಆಗಿರುವ ಮ್ಯಾಗ್ನಸ್ ಕಾರ್ಲ್‌ಸನ್ ಎದುರು ಫೈನಲ್‌ನಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಜಿದ್ದಾಜಿದ್ದಿನ ಪೈಪೋಟಿ ನೀಡಿದ್ದರು. ಲೋಕಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಮಂಡಿಸಿದ ಮಧ್ಯಂತರ ಬಜೆಟ್‌ ವೇಳೆ 2010ರಲ್ಲಿ ಭಾರತದಲ್ಲಿ 20 ಮಂದಿ ಚೆಸ್ ಗ್ರ್ಯಾನ್‌ಮಾಸ್ಟರ್‌ಗಳಿದ್ದರು, ಈಗ ಭಾರತದಲ್ಲಿ ಚೆಸ್ ಗ್ರ್ಯಾನ್‌ಮಾಸ್ಟರ್‌ಗಳ ಸಂಖ್ಯೆ 80ಕ್ಕೇರಿದೆ ಎಂದು ಹೇಳಿದ್ದಾರೆ.

“ಕ್ರೀಡಾ ಕ್ಷೇತ್ರದಲ್ಲಿ ನಮ್ಮ ಯುವಕರು ದೇಶದ ಹೆಸರನ್ನು ಉನ್ನತ ಸ್ಥಾನಕ್ಕೇರುವಂತೆ ಮಾಡಿದ್ದರ ಬಗ್ಗೆ ನಮ್ಮೆಲ್ಲರಿಗೂ ಹೆಮ್ಮೆಯಿದೆ. 2023ರಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಹಾಗೂ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಹಿಂದೆಂದಿಗಿಂತಲೂ ಹೆಚ್ಚಿನ ಪದಕ ಸಾಧನೆ ಮಾಡಿದ್ದು, ಯುವಕರಲ್ಲಿನ ಆತ್ಮವಿಶ್ವಾಸವನ್ನು ಪ್ರತಿಫಲಿಸುತ್ತದೆ” ಎಂದಿದ್ದಾರೆ.

ಚೆಸ್ ಪ್ರತಿಭೆಯಾಗಿರುವ ಹಾಗೂ ನಮ್ಮ ನಂಬರ್ ಒನ್ ಶ್ರೇಯಾಂಕಿತ ಆಟಗಾರ ಆರ್ ಪ್ರಜ್ಞಾನಂದ ಕಳೆದ ವರ್ಷ ನಡೆದ ಚೆಸ್ ವಿಶ್ವಕಪ್ ಟೂರ್ನಿಯಲ್ಲಿ ವಿಶ್ವ ಚಾಂಪಿಯನ್‌ ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ದ ಸಾಕಷ್ಟು ಬಿರುಸಿನ ಪೈಪೋಟಿ ನೀಡಿದ್ದರು. 2010ರಲ್ಲಿ 20 ಚೆಸ್ ಗ್ರ್ಯಾನ್‌ಮಾಸ್ಟರ್‌ಗಳಿದ್ದರು, ಇಂದು ಆ ಸಂಖ್ಯೆ 80ರ ಗಡಿ ದಾಟಿದೆ ಎಂದು ಅವರು ಹೇಳಿದ್ದಾರೆ.

ಕಳೆದ ತಿಂಗಳು 18 ವರ್ಷದ ಚೆಸ್ ತಾರೆ ಟಾಟಾ ಸ್ಟೀಲ್ ಚೆಸ್ ಟೂರ್ನಿಯಲ್ಲಿ ಚೀನಾದ ಲಿರಿನ್ ಅವರನ್ನು ಮಣಿಸುವ ಮೂಲಕ ಚೆಸ್‌ ದಂತಕಥೆ ವಿಶ್ವನಾಥನ್ ಆನಂದ್ ಅವರನ್ನು ಹಿಂದಿಕ್ಕಿ ಭಾರತದ ನಂ.1 ಚೆಸ್ ಪಟುವಾಗಿ ಆರ್ ಪ್ರಜ್ಞಾನಂದ ಹೊರಹೊಮ್ಮಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!