ನಾಳೆಯಿಂದ ಹಣಕಾಸು ನಿಯಮ ಬದಲಾವಣೆ: UPI, ಮಿನಿಮಮ್ ಬ್ಯಾಂಕ್ ಬ್ಯಾಲೆನ್ಸ್ ಗೆ ಹೊಸ ರೂಲ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏ.1 ರಿಂದ ಹಣಕಾಸು ನಿಯಮಗಳಲ್ಲಿ ಹಲವಾರು ಬದಲಾವಣೆಗಳು ಜಾರಿಗೆ ಬರಲಿದ್ದು, ತೆರಿಗೆದಾರರು, ಯುಪಿಐ ಬಳಕೆದಾರರು, ಕ್ರೆಡಿಟ್ ಕಾರ್ಡ್ ಹೊಂದಿರುವವರು ಮತ್ತು ಪಿಂಚಣಿದಾರರ ಮೇಲೆ ಇದು ಪರಿಣಾಮ ಬೀರಲಿದೆ.

2025-26ರ ಹಣಕಾಸು ವರ್ಷ ಪ್ರಾರಂಭವಾಗುತ್ತಿದ್ದಂತೆ, ಆದಾಯ ತೆರಿಗೆ, ಕ್ರೆಡಿಟ್ ಕಾರ್ಡ್ಗಳು, ಯುಪಿಐ ಭದ್ರತೆ, ಜಿಎಸ್‌ಟಿ ಹಾಗೂ ಬ್ಯಾಂಕಿಂಗ್ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ತರಲಿದೆ.

ಪಿಂಚಣಿ ಯೋಜನೆ:
ಹಳೆಯ ಪಿಂಚಣಿ ವ್ಯವಸ್ಥೆಯನ್ನು ಬದಲಾಯಿಸುವ ಏಕೀಕೃತ ಪಿಂಚಣಿ ಯೋಜನೆ. 2024ರ ಆಗಸ್ಟ್ ನಲ್ಲಿ ಪರಿಚಯಿಸಲಾದ ಯುಪಿಎಸ್, ಏ.1 ರಿಂದ ಅಧಿಕೃತವಾಗಿ ಜಾರಿಗೆ ಬರಲಿದೆ.

ಯುಪಿಐ ನಿಯಮಗಳು:
ಏ.1 ರಿಂದ ನಿಷ್ಕ್ರಿಯ ಮೊಬೈಲ್ ಸಂಖ್ಯೆಗಳಿಂದ ಯುಪಿಐ ವಹಿವಾಟು ನಡೆಸಲಾಗುವುದಿಲ್ಲ.

ಕನಿಷ್ಠ ಬ್ಯಾಲೆನ್ಸ್:
ಬ್ಯಾಂಕಿಂಗ್ ವಲಯದಲ್ಲಿ, ಎಸ್‌ಬಿಐ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಕೆನರಾದಂತಹ ಪ್ರಮುಖ ಬ್ಯಾಂಕ್‌ಗಳು ಕನಿಷ್ಠ ಬ್ಯಾಲೆನ್ಸ್ ನಿಯಮಗಳನ್ನು ನವೀಕರಿಸುತ್ತಿದ್ದು, ಪರಿಷ್ಕೃತ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳಲು ಸಾಧ್ಯವಾಗದಿದ್ದರೆ ಗ್ರಾಹಕರು ಹೊಸ ಬ್ಯಾಂಕಿಂಗ್ ಮಾರ್ಗಸೂಚಿಗಳ ಪ್ರಕಾರ ದಂಡ ಪಾವತಿಸಬೇಕಾಗುತ್ತದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!