February 10, 2026
Tuesday, February 10, 2026
spot_img

ಕ್ಯಾಂಪಸ್‌ ಅಂದ್ಮೇಲೆ ಮರಗಿಡಗಳಿಲ್ಲದಿದ್ರೆ ಹೇಗೆ? ಹಸಿರಿನ ಕೊರತೆ ಇರುವ ಕಾಲೇಜುಗಳಿಗೆ ದಂಡ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಾಲೇಜು ಕ್ಯಾಂಪಸ್‌ ಎಂದಮೇಲೆ ನೂರಾರು ಮರಗಿಡಗಳು ಇಲ್ಲದಿದ್ದರೆ ಹೇಗೆ? ಬ್ರೇಕ್‌ನಲ್ಲಿ ಕುಳಿತು ಓದಲು, ಬಂಕ್‌ ಮಾಡಿದವರು ಸ್ನೇಹಿತರ ಜತೆ ಹರಟಲು, ಊಟ ಮಾಡಲು ಮರದ ನೆರಳು ಬೇಕೇ ಬೇಕಲ್ಲವೇ?

ಪರಿಸರ ಸಂರಕ್ಷಣೆಗಾಗಿ ಕ್ಯಾಂಪಸ್‌ನಲ್ಲಿ ಮರ-ಗಿಡಗಳ ಕೊರತೆ ಇರುವ ಕಾಲೇಜುಗಳಿಗೆ ದಂಡ ವಿಧಿಸಲು ಇಂದೋರ್‌ ನ ದೇವಿ ಅಹಲ್ಯಾ ವಿಶ್ವವಿದ್ಯಾಲಯ ನಿರ್ಧರಿಸಿದೆ.

ಈ ಬಗ್ಗೆ ವಿಶ್ವವಿದ್ಯಾಲಯದ ಕಾಲೇಜು ಅಭಿವೃದ್ಧಿ ಮಂಡಳಿ ಮಾಹಿತಿ ನೀಡಿದ್ದು, ಮಧ್ಯಪ್ರದೇಶ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಯಾವಾಗಲೂ ಹಸಿರು ಕ್ಯಾಂಪಸ್‌ಗಳನ್ನು ಕಾಪಾಡಿಕೊಳ್ಳಲು ಒತ್ತು ನೀಡಿದೆ ಮತ್ತು ಮರ ನೆಡುವ ಬಗ್ಗೆ ನಿರಂತರ ನಿರ್ದೇಶನಗಳನ್ನು ನೀಡಿದೆ ಎಂದಿದೆ.

ಈ ನಿರ್ದೇಶನಗಳನ್ನು ಪರಿಣಾಮಕಾರಿಯಾಗಿ ಪಾಲಿಸಬೇಕೆಂದು ನಾವು ಬಯಸುತ್ತೇವೆ. ಆದ್ದರಿಂದ, ಸಂಸ್ಥೆಗಳ ಕ್ಯಾಂಪಸ್‌ಗಳಲ್ಲಿ ಸಾಕಷ್ಟು ಹಸಿರು ಇಲ್ಲದಿದ್ದರೆ ಅವುಗಳ ಮೇಲೆ ದಂಡ ವಿಧಿಸುವ ಪ್ರಸ್ತಾಪವನ್ನು ನಾವು ಪರಿಗಣಿಸುತ್ತಿದ್ದೇವೆ ಎಂದಿದೆ. ಕಾಲೇಜುಗಳು ವಿಶ್ವವಿದ್ಯಾಲಯದೊಂದಿಗೆ ಸಂಯೋಜಿತವಾಗಿರಲು ಕ್ಯಾಂಪಸ್‌ಗಳಲ್ಲಿ ಹಸಿರು ಹೊದಿಕೆಯನ್ನು ಕಡ್ಡಾಯಗೊಳಿಸುವುದನ್ನು ಸಹ ನಾವು ಪರಿಗಣಿಸುತ್ತಿದ್ದೇವೆ ಎಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !