ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಪರಾಧ ಸ್ಥಾನದಲ್ಲಿರುವ ವೇಳೆ ವ್ಯಕ್ತಿ ಮೃತಪಟ್ಟರೆ ಆತನಿಗೆ ಕೋರ್ಟ್ ವಿಧಿಸಿದ್ದ ದಂಡವನ್ನು ಆತನ ಆಸ್ತಿಯಿಂದ ಅಥವಾ ಆತನ ಆಸ್ತಿಯ ಉತ್ತರಾಧಿಕಾರಿಯಿಂದ ವಸೂಲಿ ಮಾಡಬಹುದೆಂದು ಕರ್ನಾಟಕ ಹೈಕೋರ್ಟ್ (Karnataka High Court) ಮಹತ್ವದ ಆದೇಶ ನೀಡಿದೆ.
ಹಾಸನದ (Hassan) ವ್ಯಕ್ತಿಗೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದ ಪ್ರಕರಣದಲ್ಲಿ ಸೆಷನ್ ಕೋರ್ಟ್ ದಂಡ ವಿಧಿಸಲಾಗಿತ್ತು. ಆದ್ರೆ, ಅದನ್ನು ವಿರೋಧಿಸಿ ಹೈಕೋರ್ಟ್ ಮೇಲ್ಮನವಿ ಸಲ್ಲಿಸಿದ್ದರು. ಆದ್ರೆ, ದುರದೃಷ್ಟವಶಾತ್ ಆ ವ್ಯಕ್ತಿ ಸಾವನ್ನಪ್ಪಿದ್ದಾನೆ.
ಅಪರಾಧಿ ಸಾವಿನ ಬಗ್ಗೆ ಹೈಕೋರ್ಟ್ ಗೆ ವಕೀಲರು ಮಾಹಿತಿ ನೀಡಿದ್ದು, ವಿಚಾರಣೆ ನಡೆದು ಅಪರಾಧಿಯ ಆಸ್ತಿಯಿಂದ ದಂಡ ವಸೂಲಿ ಮಾಡಬಹುದು ಎಂದು ಹೈಕೋರ್ಟ್ ತೀರ್ಪು ನೀಡಿದೆ.
ನ್ಯಾಯಮೂರ್ತಿ ಶಿವಶಂಕರ ಅಮರಣ್ಣವರ್ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ನೀಡಿದೆ.